ಗೋವಾ: 2022ರಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಶುರುವಾಗಿದೆ. ಇಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗೋವಾಗೆ ಭೇಟಿ ನೀಡಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ.
ಗೋವಾದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. 2022ಕ್ಕೆ ಅದರ ಅವಧಿ ಮುಗಿಯಲಿದ್ದು, ಫೆಬ್ರವರಿ - ಮಾರ್ಚ್ನಲ್ಲಿ ಚುನಾವಣೆ ನಡೆಯಲಿದೆ. ಗೋವಾದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳು ಪಣತೊಟ್ಟಿವೆ.
ಗೋವಾದ ವೆಲ್ಸಾವೊದಲ್ಲಿ ಮೀನುಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಗೋವಾವನ್ನು ಕಲುಷಿತ ಪ್ರದೇಶವಾಗಲು ಬಿಡುವುದಿಲ್ಲ. ಕಲ್ಲಿದ್ದಲು ಹಬ್ ಆಗಲು ನಾವು ಬಿಡುವುದಿಲ್ಲ. ನಾವು ಎಲ್ಲರಿಗಾಗಿ ಪರಿಸರವನ್ನು ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಪರಿಸರ ರಕ್ಷಣೆ ಆಗಿಲಿದೆ ಎಂದರು.