ಕರ್ನಾಟಕ

karnataka

ETV Bharat / bharat

ರಾಜಸ್ಥಾನಕ್ಕೆ ತಲುಪಿದ ಭಾರತ್​ ಜೋಡೋ ಯಾತ್ರೆ.. ಗೆಹ್ಲೋಟ್ - ಪೈಲಟ್ ಜೊತೆಗೆ ರಾಹುಲ್ ಹೆಜ್ಜೆ - ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ರಾಜಸ್ಥಾನದ ಜಲಾವರ್‌ನಲ್ಲಿ ಬುಡಕಟ್ಟು ಸಮುದಾಯದ ನೃತ್ಯಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ನಾಯಕರಾದ ಸಚಿನ್ ಪೈಲಟ್ ಮತ್ತು ಕಮಲ್ ನಾಥ್ ಅವರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.

rahul-gandhi-bharat-jodo-yatra-reached-rajasthan
ರಾಜಸ್ಥಾನಕ್ಕೆ ತಲುಪಿದ ಭಾರತ್​ ಜೋಡೋ ಯಾತ್ರೆ: ಗೆಹ್ಲೋಟ್ - ಪೈಲಟ್ ಜೊತೆಗೆ ರಾಹುಲ್ ಹೆಜ್ಜೆ

By

Published : Dec 4, 2022, 10:14 PM IST

ಜೈಪುರ (ರಾಜಸ್ಥಾನ):ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯು ಭಾನುವಾರ ಮಧ್ಯಪ್ರದೇಶದ ಮೂಲಕ ರಾಜಸ್ಥಾನಕ್ಕೆ ತಲುಪಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಂಸ್ಕೃತಿಕ ಮತ್ತು ಜನಪದ ನೃತ್ಯ, ಕಲಾ ತಂಡಗಳೊಂದಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.

ತಮಿಳುನಾಡಿನಿಂದ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯು ಇದುವರೆಗೆ ಮಧ್ಯಪ್ರದೇಶದವರೆಗೆ ಸಾಗಿದೆ. ಇಂದು ಮಧ್ಯಪ್ರದೇಶದಲ್ಲಿ ರಾಜಸ್ಥಾನದ ಗಡಿಯಿಂದ ಸ್ವಲ್ಪ ದೂರದಲ್ಲಿ ಯಾತ್ರೆ ಮುಕ್ತಾಯಗೊಂಡಿದೆ. ಗಡಿಯಿಂದ ಕಾರಿನಲ್ಲಿ ರಾಹುಲ್ ಗಾಂಧಿ ಸಂಜೆ 6:30ರ ಸುಮಾರಿಗೆ ರಾಜಸ್ಥಾನಕ್ಕೆ ತಲುಪಿದರು. ಚಾವ್ಲಿ ಗಡಿಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಗೆ ರಾಜಸ್ಥಾನ ಸಂಪುಟದ 18 ಜನ ಸಚಿವರು ಮತ್ತು ಹಲವು ಶಾಸಕರು ರಾಹುಲ್​ ಅವರನ್ನು ಬರಮಾಡಿಕೊಂಡರು.

ಈ ವೇಳೆ ರಾಜಸ್ಥಾನದ ಜಲಾವರ್‌ನಲ್ಲಿ ಬುಡಕಟ್ಟು ಸಮುದಾಯದ ನೃತ್ಯಕ್ಕೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ನಾಯಕರಾದ ಸಚಿನ್ ಪೈಲಟ್ ಮತ್ತು ಕಮಲ್ ನಾಥ್ ಅವರೊಂದಿಗೆ ರಾಹುಲ್​ ಕೈ ಹಿಡಿದು ನೃತ್ಯ ಮಾಡಿದರು. ಇನ್ನು, ಸಚಿನ್ ಪೈಲಟ್ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸಲು ಬಂದಿದ್ದರು. ಈ ಮೂಲಕ ರಾಜ್ಯ ಕಾಂಗ್ರೆಸ್​ನಲ್ಲಿ ಭಿನ್ನಾಭಿಪ್ರಾಯ ಶಮನದ ಸಂದೇಶವನ್ನೂ ರವಾನಿಸಲಾಗಿದೆ.

ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಯಾತ್ರೆಯ ಭದ್ರತೆಯಿಂದ ಹಿಡಿದು ಸಂಪೂರ್ಣ ವ್ಯವಸ್ಥೆಗಾಗಿ ಸುಮಾರು 3500 ಪೊಲೀಸರನ್ನು ನಿಯೋಜಿಸಲಾಗಿದೆ. ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಮಾಂಡೋವರೆಗೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ರಾಜಸ್ಥಾನದ 6 ಜಿಲ್ಲೆಗಳಲ್ಲಿ 18 ದಿನಗಳವರೆಗೆ 490 ಕಿಲೋಮೀಟರ್ ಯಾತ್ರೆ ನಡೆಯಲಿದೆ.

ಇದನ್ನೂ ಓದಿ:ನಮ್ಮ ಪಕ್ಷದ ರಾಜ್ಯ ಘಟಕವು ಸಂಪೂರ್ಣವಾಗಿ ಒಗ್ಗಟ್ಟಾಗಿದೆ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್

ABOUT THE AUTHOR

...view details