ಕರ್ನಾಟಕ

karnataka

ETV Bharat / bharat

Rahul Gandhi: ಅಕ್ಟೋಬರ್​ನಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ 2.0: ಗುಜರಾತ್​ TO ಮೇಘಾಲಯ ಪಾದಯಾತ್ರೆ - ಗುಜರಾತ್​ TO ಮೇಘಾಲಯ ಪಾದಯಾತ್ರೆ

Bharat Jodo Yatra: ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಪಕ್ಷಗಳು I.N.D.I.A. ಮೈತ್ರಿಕೂಟ ರಚಿಸಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ಭಾರತ್​ ಜೋಡೋ 2.0 ಯಾತ್ರೆಗೆ ಅಣಿಯಾಗುತ್ತಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ

By

Published : Aug 16, 2023, 3:53 PM IST

ಲಖನೌ:ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಗುಜರಾತ್​​ನಿಂದ ಮೇಘಾಲಯವರೆಗೆ ಯಾತ್ರೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕರ ಮಟ್ಟದಲ್ಲಿ ಗುಸುಗುಸು ಶುರುವಾಗಿದೆ.

ಎರಡನೇ ಹಂತದ ಭಾರತ್ ಜೋಡೋ ಕುರಿತು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಅವರು ಕಳೆದ ಸಲ ದಕ್ಷಿಣೋತ್ತರವಾಗಿ ಯಾತ್ರೆ ನಡೆಸಿದ್ದರು. ಈ ಬಾರಿ ಪಶ್ಚಿಮದಿಂದ ಪೂರ್ವದ ರಾಜ್ಯಗಳಲ್ಲಿ ಪಾದಯಾತ್ರೆಯನ್ನು ನಡೆಸಲಿದ್ದಾರೆ. ಯಾವ್ಯಾವ ರಾಜ್ಯಗಳಲ್ಲಿ ಯಾತ್ರೆ ಹಾದುಹೋಗಲಿದೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ 2 ವಾರ ಯಾತ್ರೆ:ಉತ್ತರ ಪ್ರದೇಶದಲ್ಲಿ ಕನಿಷ್ಠ 15 ರಿಂದ 20 ದಿನಗಳ ಕಾಲ ರಾಹುಲ್ ಗಾಂಧಿ ಅವರ 2ನೇ ಹಂತದ ಭಾರತ್ ಜೋಡೋ ಯಾತ್ರೆಯು ಸಾಗಲಿದ್ದು, ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯರು ಇದರ ಸಿದ್ಧತೆ ನಡೆಸಿದ್ದಾರೆ. ರಾಜ್ಯದ 30 ರಿಂದ 35 ಲೋಕಸಭಾ ಕ್ಷೇತ್ರಗಳಲ್ಲಿ ಯಾತ್ರೆಯು ಹಾದುಹೋಗಲಿದೆ. ಇದರ ಬಳಿಕ ಈ ಎಲ್ಲ ಲೋಕಸಭಾ ಸ್ಥಾನಗಳಲ್ಲಿ ಪಕ್ಷ ಹಿಡಿತ ಸಾಧಿಸಲು ತಂತ್ರ ರೂಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಭಾರತ್ ಜೋಡೋ ಯಾತ್ರೆಯು ಮುಖ್ಯವಾಗಿ ಬುಂದೇಲ್‌ಖಂಡದ ಮೂಲಕ ಬಿಜ್ನೋರ್, ನಗೀನಾ, ಅಮ್ರೋಹಾ, ಮೊರಾದಾಬಾದ್, ಸಂಭಾಲ್, ರಾಂಪುರ, ಕಾನ್ಪುರ್, ಲಖನೌ ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಲಿದೆ. ಈ ಎಲ್ಲಾ ಸ್ಥಾನಗಳಲ್ಲಿ ಮುಸ್ಲಿಮ್​ ಮತಗಳೇ ನಿರ್ಣಾಯಕವಾಗಿವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್​ ಪರ ವಾಲಲಿದ್ದಾರೆ ಎಂಬ ಲೆಕ್ಕಾಚಾರ ಪಕ್ಷದ್ದು.

ಇದರ ಜೊತೆಗೆ ಮುಸ್ಲಿಂ-ದಲಿತ ಜಾತಿ ಸಮೀಕರಣವನ್ನು ಒಟ್ಟುಗೂಡಿಸಿ ಪಕ್ಷವು ಈ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಯೋಜಿಸಿದೆ. ಇದಕ್ಕಾಗಿ ಯಾತ್ರೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ 2009ರ ಚುನಾವಣೆಯಂತೆ ಮತ್ತೊಮ್ಮೆ ಬಿಗಿ ಹಿಡಿತ ಸಾಧಿಸಲು ಸಾಧ್ಯವಿರುವ ಪ್ರತಿಯೊಂದು ಕ್ಷೇತ್ರವನ್ನು ಪರ್ಯಟನೆ ಮಾಡಲು ಸಜ್ಜಾಗಿದ್ದಾರೆ.

ದಕ್ಷಿಣೋತ್ತರ ಯಾತ್ರೆ:ಮೊದಲ ಹಂತದಲ್ಲಿ ರಾಹುಲ್​ ಗಾಂಧಿ ಅವರು ದಕ್ಷಿಣೋತ್ತರವಾಗಿ ತಮಿಳುನಾಡಿನಿಂದ ಜಮ್ಮು ಕಾಶ್ಮೀರದವರೆಗೆ ಯಾತ್ರೆ ನಡೆಸಿದ್ದರು. ಹಲವು ರಾಜ್ಯಗಳಲ್ಲಿ ಯಾತ್ರೆ ಮುನ್ನಡೆಸಿದ್ದರು. ಕರ್ನಾಟಕದಲ್ಲೂ ಯಾತ್ರೆ ನಡೆಸಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು.

ಇದನ್ನೂ ಓದಿ:ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ 2.0 ಪ್ರಾರಂಭಿಸಲು ಕಾಂಗ್ರೆಸ್ ಸಜ್ಜು!

ABOUT THE AUTHOR

...view details