ಲಖನೌ :ಖ್ಯಾತ ಕವಿ ಮುನಾವ್ವರ್ ರಾಣಾ ಪುತ್ರ ತಬ್ರೇಜ್ ರಾಣಾ ಅವರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ರಾಯ್ಬರೇಲಿ ಪೊಲೀಸರು ತಡರಾತ್ರಿ ಮುನಾವ್ವರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ತಬ್ರೇಜ್ ರಾಣಾ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ತಬ್ರೇಜ್ ಬಂಧನಕ್ಕಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ತಬ್ರೇಜ್ ಪತ್ತೆಯಾಗಿಲ್ಲ.
ಪೊಲೀಸರು ದಾಳಿ ವೇಳೆ ಮಹಿಳೆಯೊಂದಿಗೆ ಅಸಭ್ಯವರ್ತನೆ ತೋರಿದ್ದಾರೆಂದು ತಬ್ರೇಜ್ ಕುಟುಂಬಸ್ಥರು ಆರೋಪಿಸಿದ್ದಾರೆ. ಯಾವುದೇ ಸುಳಿವು ಕೊಡದೆ ಮನೆಯೊಳಗೆ ನುಗ್ಗಿದ್ದಲ್ಲದೆ, ಎಲ್ಲರ ಫೋನ್ಗಳನ್ನು ಕಸಿದುಕೊಂಡಿದ್ದಾರೆ ಎಂದೂ ದೂರಿದ್ದಾರೆ.