ಕ್ವಾಡ್ ಎಂದು ಜನಪ್ರಿಯವಾಗಿ ಕರೆಯಲಾಗುವ ಚತುಃಪಕ್ಷೀಯ ಭದ್ರತಾ ಒಪ್ಪಂದ ಎಂಬುದು ಆಸ್ಟ್ರೇಲಿಯಾ, ಭಾರತ, ಅಮೆರಿಕ ಮತ್ತು ಜಪಾನನ್ನು ಒಗ್ಗೂಡಿಸುವ ಕಾರ್ಯತಂತ್ರ ಆಗಿದೆ. 2004 ರಲ್ಲಿ ಸಂಭವಿಸಿದ ಸುನಾಮಿ ಅಂತರರಾಷ್ಟ್ರೀಯ ದುರಂತದಲ್ಲಿ ಸಂತ್ರಸ್ತರಾದವರಿಗೆ ಮಾನವೀಯ ನೆರವು ನೀಡುವ ಸಕಾರಾತ್ಮಕ ದೃಷ್ಟಿಕೋನದ ಜಂಟಿ ಪ್ರಯತ್ನದ ಫಲವಾಗಿ ಇದು ಜನ್ಮ ಪಡೆಯಿತು. 2007 ರವರೆಗೂ ಇದು ಕಾಗದಪತ್ರಗಳಲ್ಲಿ ಸುಪ್ತವಾಗಿಯೇ ಉಳಿದಿತ್ತು. ಆದರೆ, ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಿಲುವಿನಿಂದಾಗಿ ಕ್ವಾಡ್ ಹುಟ್ಟು ಹಾಕುವ ಕಲ್ಪನೆ ಚಿಗುರೊಡೆಯಿತು. ಕಾರ್ಯತಂತ್ರದ ವೇದಿಕೆಯಾದ ಕ್ವಾಡ್ 2017 ರಿಂದ ವಿವಿಧ ಹಂತಗಳಲ್ಲಿ ನಡೆದ ವ್ಯಾಪಕ ಸಮಾಲೋಚನೆಗಳ ಫಲವಾಗಿದೆ.
ನಾಲ್ಕು ದೇಶಗಳ ಮುಖ್ಯಸ್ಥರ ಜಂಟಿ ಘೋಷಣೆಯಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೂ ಘೋಷಣೆಯು ಅವರ ಕಾರ್ಯಸೂಚಿಯನ್ನು ಸಾಕಷ್ಟು ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್ ಸಂಘಟನೆಯನ್ನು ಭಾರತದ ತಾತ್ವಿಕ ದೃಷ್ಟಿಕೋನದ ಸಂಕೇತ ಎಂದು ಸ್ವಾಗತಿಸಿದರು. ಇದು ʼವಸುದೈವ ಕುಟುಂಬಕಂʼ ಗೆ ಮಹತ್ವ ನೀಡುತ್ತದೆ. ಕರೋನಾ ಲಸಿಕೆ ಕುರಿತು ಭಾರತದ ಯೋಜನೆ ಹಾಗೂ ಹವಾಮಾನ ಬದಲಾವಣೆ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ದೇಶ ಮುಂದಡಿ ಇರಿಸಿರುವುದು ಜಗತ್ತಿನಾದ್ಯಂತ ಉತ್ತಮ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು.
ಕ್ವಾಡ್ ರಾಜ್ಯಗಳ ಮುಖ್ಯಸ್ಥರು ಮಾಡಿದ ಜಂಟಿ ಘೋಷಣೆಯಲ್ಲಿ ಕೋವಿಡ್ - 19 ಲಸಿಕೆ ಸಂಬಂಧಿತ ವಿಷಯಗಳು, ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ತಾಂತ್ರಿಕ ಪ್ರಗತಿಯ ಸಹಕಾರ ಕುರಿತು ರಚನಾ ಕ್ರಿಯಾ ತಂಡಗಳ ರಚನೆಗೂ ಕರೆ ನೀಡಿತು.
ಚೀನಾ 46.3 ಕೋಟಿ ಡೋಸ್ ಲಸಿಕೆ ರಫ್ತು ಮತ್ತು ವಿತರಣೆಗೆ ಸಿದ್ಧತೆ ನಡೆಸುತ್ತಿರುವ ಈ ಸಮಯದಲ್ಲಿ, ಕ್ವಾಡ್ ಸಂಘಟನೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನೆಲೆಗೊಂಡಿರುವ 24 ದೇಶಗಳಲ್ಲಿ 100 ಕೋಟಿ ಡೋಸ್ ಲಸಿಕೆಗಳನ್ನು ವಿತರಿಸಲು ಯೋಜನೆ ರೂಪಿಸುತ್ತಿದೆ. ಅಮೆರಿಕದಿಂದ ದೊರೆಯಲಿರುವ ಔಷಧ ಜ್ಞಾನ, ಜಪಾನ್ ಮತ್ತು ಅಮೆರಿಕದಿಂದ ಒದಗಿಬರುವ ಹಣಕಾಸಿನ ನೆರವು ಮತ್ತು ಆಸ್ಟ್ರೇಲಿಯಾದಿಂದ ದಕ್ಕಲಿರುವ ಔಷಧ ರವಾನೆ ಸೌಲಭ್ಯಗಳೊಂದಿಗೆ, ಭಾರತ 100 ಕೋಟಿ ಡೋಸ್ ಲಸಿಕೆ ತಯಾರಿಕೆ ಕೈಗೆತ್ತಿಕೊಳ್ಳುತ್ತಿದೆ. ಭವಿಷ್ಯದ ತಾಂತ್ರಿಕ ಬೆಳವಣಿಗೆಗಳು ಜಂಟಿ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಸಹಾಯ ಮಾಡಲು ಕ್ವಾಡ್ ನಿರ್ಧರಿಸಿದೆ. ಕ್ವಾಡ್ ಖಂಡಿತವಾಗಿಯೂ ಆರ್ಥಿಕವಾಗಿ, ವಾಣಿಜ್ಯಿಕವಾಗಿ ಮತ್ತು ಮಿಲಿಟರಿ ಬಲದ ಚೀನಾವನ್ನು ಎದುರಿಸಲು ಇಟ್ಟ ನಿಶ್ಚಿತ ಹೆಜ್ಜೆ ಕ್ವಾಡ್ ಆಗಿದೆ.
ನಾಲ್ಕು ಸದಸ್ಯರ ಕ್ವಾಡ್ ಸಂಘಟನೆಯಲ್ಲಿ ಭಾರತ ಏಕೈಕ ನ್ಯಾಟೋ ಅಲ್ಲದ ದೇಶವಾಗಿದೆ. ಚೀನಾದೊಂದಿಗೆ ದೀರ್ಘ ಗಡಿಯನ್ನು ಹಂಚಿಕೊಳ್ಳುವುದರ ಜೊತೆಗೆ ಭಾರತ ಅದರೊಂದಿಗೆ ಹಲವಾರು ಗಡಿ ಸಮಸ್ಯೆಗಳಲ್ಲಿ ಸಿಲುಕಿದೆ. ಚೀನಾ ವಿಸ್ತರಣಾವಾದಿ ನೀತಿಯನ್ನು ಅನುಸರಿಸುತ್ತಿರುವಾಗ ಮತ್ತು ನೆರೆಹೊರೆಯ ರಾಷ್ಟ್ರಗಳಿಗೆ ಹೋರಾಡುವಂತೆ ಪ್ರೇರಿಪಿಸಲು ಪ್ರಾರಂಭಿಸಿದಾಗ ಉದ್ವಿಗ್ನತೆಗಳು ಭುಗಿಲೆದ್ದವು. ಡೆಂಗ್ ಕ್ಸಿಯಾವೋ ಪಿಂಗ್ ನೀಡಿದ ಚತುರ ಸಲಹೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ ಚೀನಾ ನಾಯಕತ್ವ ತನ್ನ ಶಕ್ತಿಗೆ ತಕ್ಕಂತೆ ವಿನಮ್ರವಾಗಿ ಇರಬೇಕು.