ಒಂದು ಭಾನುವಾರ ಮುಂಜಾನೆ ಲತಾ (ಅವರ ನಿಜವಾದ ಹೆಸರಲ್ಲ) ಹಾಗೂ ಅವರ ಪತಿ ಪೊಲೀಸರು ಬಂದು ಬಾಗಿಲು ತಟ್ಟಿದ ಶಬ್ದದಿಂದಲೇ ಎಚ್ಚರಗೊಂಡಿದ್ದರು. ಬಂದವರೇ ಇಬ್ಬರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಬಂದು, ತಾವು ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದರು. ಲತಾ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅದೃಷ್ಟವಶಾತ್ ತುರ್ತು ಚಿಕಿತ್ಸೆ ಪಡೆದು ಸಾವಿನ ದವಡೆಯಿಂದ ಪಾರಾಗಿದ್ದರು.
ಆದರೆ ಅಲ್ಲಿಂದ ಪಾರಾದ ಲತಾ ಅವರನ್ನು ಪೊಲೀಸರ ಈ ವಿಚಾರಣೆ ಕಿರುಕುಳ ಹಾಗೂ ಅಕ್ಕಪಕ್ಕದವರ ಪ್ರಶ್ನೆಗಳ ಕಿರುಕುಳ ಮತ್ತೊಂದು ತಲೆನೋವಲ್ಲಿ ಸಿಲುಕಲಿಸಿತ್ತು. ಇಂತಹ ಲತಾ ಅವರಂಥ ಕಥೆ ಭಾರತದಲ್ಲಿ ತುಂಬಾ ಸಾಮಾನ್ಯವಾಗಿದೆ. ಆತ್ಮಹತ್ಯೆಗೆ ಪ್ರಯತ್ನಿಸಿ, ಸಾವಿನ ದವಡೆಯಿಂದ ಪಾರಾದ ಮೇಲೂ ಇತ್ತ ವಿಚಾರಣೆ ಹೆಸರಲ್ಲಿ ಪೊಲೀಸರು ಹಾಗೂ ಕುತೂಹಲದ ಹೆಸರಿನಲ್ಲಿ ನೆರೆಹೊರೆಯವರ ಪ್ರಶ್ನೆಗಳು, ವ್ಯಕ್ತಿಯನ್ನು ಮತ್ತಷ್ಟು ಕುಗ್ಗಿಸುತ್ತಿವೆ.
ಆತ್ಮಹತ್ಯೆ ಶಿಕ್ಷಾರ್ಹ ಅಪರಾಧ: ನಮ್ಮ ದೇಶದಲ್ಲಿ 2021ರಲ್ಲಿ 164,000ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆ ಆತ್ಮಹತ್ಯೆಗಳ ಸಂಖ್ಯೆಯನ್ನು 2020ಕ್ಕೆ ಹೋಲಿಸಿದರೆ ಅದರಲ್ಲಿ ಶೇಕಡಾ 7.2 ರಷ್ಟು ಹೆಚ್ಚಳವಾಗಿದೆ. 2018ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಗೆ ಬರುವರೆಗೆ ಆತ್ಮಹತ್ಯೆಗೆ ಯತ್ನಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿತ್ತು. 2018 ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ, ಇದು ಸೆಕ್ಷನ್ 309 ಗೆ ಭಾರೀ ವಿನಾಯಿತಿಯನ್ನು ಸೃಷ್ಟಿಸುವ ಮೂಲಕ ಆತ್ಮಹತ್ಯೆಯನ್ನು ಅಪರಾಧವಲ್ಲ. ಶಿಕ್ಷೆಯ ಬದಲಿಗೆ, ಈ ಕಾಯ್ದೆಯು ಮಾನಸಿಕ ಆರೋಗ್ಯ ಬೆಂಬಲ ಮತ್ತು ಪುನರ್ವಸತಿಯನ್ನು ಒದಗಿಸಲು ಸರ್ಕಾರಗಳನ್ನು ಒತ್ತಾಯಿಸುತ್ತದೆ. ಈ ಕಾಯ್ದೆ ಸೆಕ್ಷನ್ 309ಕ್ಕೆ ಭಾರಿ ವಿನಾಯಿತಿಯನ್ನು ತರುವ ಮೂಲಕ ಆತ್ಮಹತ್ಯೆ ಅಪರಾಧವಲ್ಲ ಎಂದು ಹೇಳಿದೆ.
ಈ ಕಾಯ್ದೆಯ ಸೆಕ್ಷನ್ 115, ಒಬ್ಬ ವ್ಯಕ್ತಿ ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ಶಿಕ್ಷೆ ವಿಧಿಸುವ ಬದಲು ಆತನಿಗೆ ಮಾನಸಿಕ ಆರೋಗ್ಯ ಬೆಂಬಲ ಹಾಗೂ ಪುನರ್ವಸತಿ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತದೆ. ಆದಾಗ್ಯೂ, ಮಾನಸಿಕ ಆರೋಗ್ಯ ಕಾಯ್ದೆಯ ಸೆಕ್ಷನ್ 115 ತಾಂತ್ರಿಕವಾಗಿ ಸೆಕ್ಷನ್ 309 ಅನ್ನು ರದ್ದುಗೊಳಿಸಿಲ್ಲ. ದಂಡ ಸಂಹಿತೆಯಿಂದ ಆತ್ಮಹತ್ಯೆಯ ಪ್ರಯತ್ನ ಸೆಕ್ಷನ್ ಅನ್ನು ಕೈಬಿಡಬೇಕಾದರೆ ಅದಕ್ಕೆ ಸಂಸದೀಯ ತಿದ್ದುಪಡಿಯ ಅಗತ್ಯವಿದೆ. ಸೆಕ್ಷನ್ 115 ಎಂಬುದು ಮಧ್ಯವರ್ತಿ ಫಿಕ್ಸ್ ಆಗಿದ್ದು, ಅದು ಸೆಕ್ಷನ್ 309 ಪ್ರಭಾವವನ್ನು ತಗ್ಗಿಸುತ್ತದೆಯಷ್ಟೆ. ಲತಾ ಅವರಂತಹ ವ್ಯಕ್ತಿ ಹಾಗೂ ಅವರ ಕುಟುಂಬದ ಜನರು ಎದುರಿಸುತ್ತಿರುವ ಕಿರುಕುಳ ಮತ್ತು ಆಪಾದನೆಗಳಿಗೆ ಕೊನೆ ಹಾಡುವುದು ಇದರ ಉದ್ದೇಶವಾಗಿದೆ.
ಆದರೂ, ಪ್ರಸ್ತುತ ಒಬ್ಬ ವ್ಯಕ್ತಿ ಆತ್ನಹತ್ಯೆಗೆ ಪ್ರಯತ್ನಿಸಿ, ಆಸ್ಪತ್ರೆಗೆ ದಾಖಲಾದಾಗ ಈ ಯತ್ನವನ್ನು ವೈದ್ಯಕೀಯ ಹಾಗೂ ಕಾನೂನು ಪ್ರಕರಣವಾಗಿ ದಾಖಲಿಸಲಾಗುತ್ತದೆ. ತಕ್ಷಣವೇ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪೊಲೀಸರು ಕುಟುಂಬವನ್ನು ಸಂಪರ್ಕಿಸಿ ರೋಗಿಯನ್ನು ಸಂದರ್ಶಿಸುತ್ತಾರೆ. ಹೆಚ್ಚು ವಿಚಾರಣೆ ಮಾಡದಿದ್ದರೂ, ಆಗಾಗ್ಗೆ ವ್ಯಕ್ತಿ ಹಾಗೂ ಅವರ ಕುಟುಂಬಕ್ಕೆ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡುವುದು ಸಾಮಾನ್ಯವಾಗಿದೆ. ಮಾನಸಿಕ ಆರೋಗ್ಯ ಕಾಯ್ದೆಯ ಸೆಕ್ಷನ್ 115 ರ ಅಡಿಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವುದರ ಬಗ್ಗೆ ವೈದ್ಯರು ಅಥವಾ ಪೊಲೀಸರಿಗೆ ಸರ್ಕಾರ ಯಾವುದೇ ರೀತಿಯ ಮಾರ್ಗದರ್ಶನವನ್ನು ನೀಡಿಲ್ಲ. ಹಾಗಾಗಿ ಅದೇ ಹಳೇಯ ಅಭ್ಯಾಸಗಳು ಮುಂದುವರಿದಿವೆ. ಶಂಕಿತ ಆತ್ಮಹತ್ಯಾ ಯತ್ನದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ವೈದ್ಯರು, ಅದು ಆತ್ಮಹತ್ಯೆ ಯತ್ನವೋ ಅಥವಾ ಬೇರೆ ರೀತಿಯ ಕಾನೂನಿನ ಉಲ್ಲಂಘನೆಯೇ ಎಂಬುದನ್ನು ಪೊಲೀಸರಿಗೆ ತಿಳಿಸುವ ಅಗತ್ಯವಿದೆ.
ಉದಾಹರಣೆಗೆ, ಆತ್ಮಹತ್ಯಾ ಪ್ರಯತ್ನವು ಕೌಟುಂಬಿಕ ಹಿಂಸಾಚಾರ ಅಥವಾ ದೈಹಿಕ ಕಿರುಕುಳದಿಂದ ಪ್ರಚೋದಿತವಾಗಿರಬಹುದು ಅಥವಾ ಇದು ಆತ್ಮಹತ್ಯೆಯಂತೆ ಕಾಣುವ ಕೊಲೆಯ ಪ್ರಯತ್ನವೂ ಆಗಿರಬಹುದು. ಅಂತಹ ಸಂದರ್ಭದಲ್ಲಿ ಪೊಲೀಸರು ವಿಭಿನ್ನವಾಗಿ ತನಿಖೆ ಮಾಡಬೇಕಾಗುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಿದರೆ ಅವರು ಇಂತಹ ಸ್ನಿವೇಶಗಳನ್ನು ನಿರ್ವಹಿಸುವ ವಿಧಾನವೂ ತುಂಬಾ ವಿಭಿನ್ನವಾಗಿರುತ್ತದೆ. ಬದುಕುಳಿದವರ ಮೇಲೆ ಅನಗತ್ಯ ಆರೋಪ ಮತ್ತು ಕಳಂಕವನ್ನು ಇರಿಸದೆ ಆತ್ಮಹತ್ಯೆ ಪ್ರಯತ್ನಗಳನ್ನು ಸೂಕ್ಷ್ಮವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಒತ್ತಡದಿಂದ ಅಲ್ಲ ಪ್ರಚೋದನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಸಾಕ್ಷ್ಯ ಒದಗಿಸುವವರೆಗೆ ಆತ್ಮಹತ್ಯೆ ಯತ್ನದ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಇಂದಿಗೂ ಆತ್ಮಹತ್ಯೆ ಯತ್ನವನ್ನು ಅಪರಾಧವೆಂದೇ ಪರಿಗಣಿಸಲಾಗಿದೆ ಎಂಬ ಅಂಶವು ಈ ದುರ್ಬಲ ಗುಂಪಿಗೆ ಕಾಳಜಿ ಒದಗಿಸಲು ಅಡ್ಡಿಪಡಿಸುತ್ತದೆ.