ಪುಣೆ (ಮಹಾರಾಷ್ಟ್ರ) :ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇವಸ್ಥಾನವನ್ನು 'ನಮೋ ಫೌಂಡೇಶನ್'ನ ಮಯೂರ್ ಮುಂಡೆ ಎಂಬುವರು ಪುಣೆಯ ಔಂದ್ ಪ್ರದೇಶದಲ್ಲಿ ನಿರ್ಮಿಸಿದ್ದಾರೆ.
ಭಾರತದ ಮೊದಲ ಮೋದಿ ದೇವಸ್ಥಾನ ಎಂದು ಹೆಸರಿಸಲ್ಪಟ್ಟ ಈ ದೇಗುಲವನ್ನು ಮಯೂರ್ ಮುಂಡೆ ಅವರು ತಮ್ಮ ಸ್ವಂತ ಭೂಮಿಯಲ್ಲಿ ನಿರ್ಮಿಸಿದ್ದಾರೆ. ಮೋದಿ ಅವರ ಸಾಧನೆಗಳನ್ನು ಆಧರಿಸಿದ ಕವಿತೆಯನ್ನು ದೇವಾಲಯದ ಆವರಣದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ಲಾಹೋರ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಮತ್ತೊಮ್ಮೆ ಧ್ವಂಸ : ಆರೋಪಿಗಳ ಬಂಧನ
ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಮಯೂರ್ ಮುಂಡೆ, ಪ್ರಧಾನಿ ಮೋದಿಯವರ ಕೆಲಸದಿಂದ ಸ್ಫೂರ್ತಿ ಪಡೆದು ಈ ದೇವಸ್ಥಾನವನ್ನು ಕಟ್ಟಿಸಿದ್ದೇನೆ ಎಂದರು. ನಾವು ಬದುಕಿರುವವರೆಗೂ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು. ಪ್ರಧಾನಿ ಮೋದಿ ಭಾರತಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಹಾಗಾಗಿ, ನಾವು ಪ್ರಧಾನಿಗೆ ದೇವಸ್ಥಾನ ನಿರ್ಮಿಸಲು ಬಯಸಿದೆವು. ಇಂತಹ ದೇವಸ್ಥಾನವನ್ನು ನಿರ್ಮಿಸಬೇಕೆಂಬ ಭಾವನೆ ಜನರಲ್ಲಿದೆ. ಇದೀಗ ನಾವು ಅವರ ಕೆಲಸದಿಂದ ಸ್ಫೂರ್ತಿ ಪಡೆದು ಈ ದೇವಾಲಯವನ್ನು ನಿರ್ಮಿಸಿದ್ದೇವೆಂದು ತಿಳಿಸಿದರು.