ಪುದುಚೇರಿ: ಕರ್ನಾಟಕ ಸರ್ಕಾರವು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ಪುದುಚೇರಿ ಸರ್ಕಾರ ವಿರೋಧಿಸಿದೆ. ಈ ಯೋಜನೆಗೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಎನ್.ರಂಗಸಾಮಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿದ್ದಾರೆ.
ಮೇಕೆದಾಟು ಯೋಜನೆ: ತಮಿಳುನಾಡು ಬಳಿಕ ಪುದುಚೇರಿಯಿಂದಲೂ ಅಪಸ್ವರ - mekedatu dam
ಅಣೆಕಟ್ಟು ನಿರ್ಮಿಸಿದರೆ ಕಾವೇರಿಯ ತುದಿಯಾಗಿರುವ ಪುದುಚೇರಿಯ ಕಾರೈಕ್ಕಲ್ ಪ್ರದೇಶದಲ್ಲಿ ಗಂಭೀರ ಪರಿಣಾಮ ಉಂಟಾಗುತ್ತದೆ- ಪುದುಚೇರಿ ಸಿಎಂ ರಂಗಸಾಮಿ
ಪುದುಚೇರಿಯ ಜನರ ಮೇಲೆ ಜಲಾಶಯದ ಪ್ರಭಾವದ ಬಗ್ಗೆ ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿ ರಾಜ್ಯ ಲೋಕೋಪಯೋಗಿ ಸಚಿವ ಕೆ.ಲಕ್ಷ್ಮೀನಾರಾಯಣನ್ ಮತ್ತು ಇತರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಣೆಕಟ್ಟು ನಿರ್ಮಿಸಿದರೆ ಕಾವೇರಿಯ ತುದಿಯಾಗಿರುವ ಪುದುಚೇರಿಯ ಕಾರೈಕ್ಕಲ್ ಪ್ರದೇಶದಲ್ಲಿ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದಿದ್ದಾರೆ.
ಎಐಎಡಿಎಂಕೆ ನಾಯಕ ಮತ್ತು ಮಾಜಿ ತಮಿಳುನಾಡು ಸಚಿವ ಡಿ.ಜಯಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಕಾವೇರಿ ನೀರಿಗಾಗಿ ತಮಿಳುನಾಡಿಗೆ ಎಲ್ಲ ಹಕ್ಕಿದೆ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ ಮತ್ತು ಈಗಾಗಲೇ ಅಣೆಕಟ್ಟು ನಿರ್ಮಾಣದ ವಿರುದ್ಧ ನಿರ್ಣಯ ಅಂಗೀಕರಿಸಿದ್ದೇವೆ ಎಂದಿದ್ದಾರೆ.