ರಾಜೌರಿ: ಜಮ್ಮು ವಿಭಾಗದ ರಜೋರಿ ಜಿಲ್ಲೆಯಲ್ಲಿ ಇಬ್ಬರು ಸ್ಥಳೀಯ ನಾಗರಿಕರ ಸಾವಿನ ಸುದ್ದಿ ಕೇಳಿ ಬಂದಿದೆ. ಸೇನಾ ಶಿಬಿರದ ಬಳಿ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನು ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲ್ತಾಗಿದೆ.
ಆದರೆ ಸೇನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದೊಂದು ಭಯೋತ್ಪಾದಕರ ದಾಳಿಯಾಗಿದೆ ಎಂದು ಹೇಳಿದೆ. ಆದರೆ ಈ ಸಂಬಂಧ ಸ್ಪಷ್ಟನೆ ಕೊಟ್ಟಿರುವ ಸೇನೆ, ರಾಜೌರಿಯ ಮಿಲಿಟರಿ ಆಸ್ಪತ್ರೆ ಬಳಿ ಮುಂಜಾನೆ ಅಪರಿಚಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಪೊಲೀಸರು, ಭದ್ರತಾ ಪಡೆಗಳು ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ತಿಳಿಸಿದೆ.
ಈ ಮೊದಲು ದಾಳಿಯಲ್ಲಿ ಮೃತಪಟ್ಟವರಿಬ್ಬರೂ ಸ್ಥಳೀಯ ನಾಗರಿಕರು ಎಂದು ಹೇಳಲಾಗಿತ್ತು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸೇನೆಯ ವಿರುದ್ಧ ಜನರು ಹೆದ್ದಾರಿ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 6.15ರ ಸುಮಾರಿಗೆ ಸೇನಾ ಶಿಬಿರದ ಆಲ್ಫಾ ಗೇಟ್ ಬಳಿ ಬರುತ್ತಿದ್ದ ವೇಳೆ ಸೇನೆ ಗುಂಡಿನ ದಾಳಿ ನಡೆಸಿದೆ ಎನ್ನಲಾಗ್ತಿದೆ.
ಗುಂಡಿನ ದಾಳಿಯಲ್ಲಿ ರಾಜೌರಿ ನಿವಾಸಿಗಳಾದ ಶಾಲಿಂದರ್ ಕುಮಾರ್ ಮತ್ತು ಕಮಲ್ ಕಿಶೋರ್ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಕೋಪಗೊಂಡ ಜನರು ಸೇನಾ ಶಿಬಿರದ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಂತರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ, ಸಂಬಂಧಿಕರಿಗೆ ಉದ್ಯೋಗ, ಮಕ್ಕಳಿಗೆ ಉಚಿತ ಶಿಕ್ಷಣ, ಎಫ್‌ಐಆರ್ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಓದಿ:ಜೈಶಂಕರ್ ಭೇಟಿ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ.. ಜಿ20 ಯಶಸ್ಸಿನ ಬಗ್ಗೆ ಸಮಾಲೋಚನೆ