ಹೈದರಾಬಾದ್ (ತೆಲಂಗಾಣ):ತಾರೆ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಅಮೆರಿಕದ ಪತಿ ನಿಕ್ ಜೋನಾಸ್ ಅವರಿಗೆ ಈಗಾಗಲೇ ಮಗುವಾಗಿದ್ದು, ಆ ಮಗುವನ್ನು ಇನ್ನೂ ಜಗತ್ತಿಗೆ ಪರಿಚಯಿಸಿಲ್ಲ. ಇದರ ನಡುವೆ ದಂಪತಿಗಳು ಎರಡನೇ ಮಗು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವರದಿಗಳು ವೈರಲ್ ಆಗುತ್ತಿವೆ.
2018ರ ಡಿಸೆಂಬರ್‌ನಲ್ಲಿ ಜೋಧ್‌ಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೋಪ್ರಾ ಮತ್ತು ಜೊನಾಸ್ ಅವರು ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ನಿಕ್ ತಮ್ಮ ಮಕ್ಕಳಲ್ಲಿ ದೀರ್ಘ ವಯಸ್ಸಿನ ಅಂತರವನ್ನು ಹೊಂದಲು ಬಯಸುವುದಿಲ್ಲವಂತೆ ಈ ಕಾರಣಕ್ಕೆ ಎರಡನೇ ಮಗುವನ್ನು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಾಡಿಗೆ ತಾಯ್ತನದಲ್ಲಿಯೇ ತಮ್ಮ ಮೊದಲ ಹೆಣ್ಣು ಮಗುವಿಗೆ ಪ್ರಿಯಾಂಕಾ ಮತ್ತು ನಿಕ್ ಪೋಷಕರಾಗಿದ್ದಾರೆ. ಜನವರಿಯಲ್ಲಿ, ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು. ದಂಪತಿಗಳು ತಮ್ಮ ಮಗಳ ಮುಖವನ್ನು ಇಲ್ಲಿಯವರೆಗೆ ಜಗತ್ತಿಗೆ ಬಹಿರಂಗಪಡಿಸಿಲ್ಲ. ಈವರೆಗೆ ವೈರಲ್ ಆದ ಫೋಟೋಗಳಲ್ಲೂ ಸಹ ಇಮೋಜಿಗಳ ಮೂಲಕ ಮಗುವಿನ ಮುಖ ಮರೆಮಾಚಿದ್ದಾರೆ.