ಶ್ರೀನಗರ: ನೂತನ ಕೃಷಿ ಕಾನೂನುಗಳನ್ನು ಸುಧಾರಿಸಲು 30 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದು ರೈತರಿಗೆ ಲಾಭವನ್ನು ತರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಾದ ಶ್ರೀನಗರದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಖಾಸಗೀಕರಣ ರೈತರ ಅಭಿವೃದ್ಧಿಗೆ ಅತ್ಯತ್ತಮ ಮೂಲ : ಕೇಂದ್ರ ಕೃಷಿ ಸಚಿವ - Privatization is the best source
ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಖಾಸಗೀಕರಣವು ರೈತರ ಕಲ್ಯಾಣದ ಅತ್ಯುತ್ತಮ ಮೂಲವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಕೃಷಿ ಸಚಿವ
ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಆದರೆ, ಕೃಷಿ ಕಾನೂನುಗಳನ್ನು ಸುಧಾರಿಸಲು 30 ವರ್ಷಗಳನ್ನು ತೆಗೆದುಕೊಂಡಿದೆ ಎಂಬುದೂ ಅಷ್ಟೇ ಸತ್ಯ. ಇದು ರೈತರಿಗೆ ಲಾಭ ತರುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಖಾಸಗೀಕರಣವು ರೈತರ ಕಲ್ಯಾಣದ ಅತ್ಯುತ್ತಮ ಮೂಲವಾಗಿದೆ ಎಂದಿದ್ದಾರೆ. ಈಗ ಯುವಕರು ತೋಟಗಾರಿಕೆ ಮತ್ತು ಕೃಷಿಯ ಹೊಸ ವಿಧಾನಗಳಲ್ಲಿ ಮುಂದಾಳತ್ವ ವಹಿಸುತ್ತಿದ್ದಾರೆ, ಇದು ತುಂಬಾ ಸ್ವಾಗತಾರ್ಹ ವಿಷಯ ಎಂದು ಹೊಗಳಿದರು.