ಚೆನ್ನೈ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನ್ಯಾಯಾಧೀಶರ ಮುಂದೆ ಬ್ಲೇಡ್ನಿಂದ ಕುತ್ತಿಗೆ ಕತ್ತರಿಸಿಕೊಂಡಿರುವ ಘಟನೆ ನಡೆದಿದ್ದು, ಇದರಿಂದ ಕೆಲ ಸಮಯ ನ್ಯಾಯಾಲಯದಲ್ಲಿ ಕೋಲಾಹಲ ಉಂಟಾಯಿತು.
ಹೈಕೋರ್ಟ್ ಆವರಣದಲ್ಲಿ ನ್ಯಾಯಾಧೀಶರ ಮುಂದೆ ಗಂಟಲು ಕತ್ತರಿಸಿಕೊಂಡ ಕೈದಿ!
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ನ್ಯಾಯಾಧೀಶರ ಎದುರೇ ಗಂಟಲು ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.
ಜೈಲರ್ ತನ್ನನ್ನು ಹಿಂಸಿಸುತ್ತಿದ್ದಾನೆಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪಾಂಡಿಯನ್ ಆರೋಪಿಸಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ. ವ್ಯಾಸರ್ಪಾಡಿ ಪ್ರದೇಶದ ಪಾಂಡಿಯನ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರ ಮಧ್ಯೆ 4ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮುಂದೆ ಮತ್ತೊಂದು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದನು. ಈ ವೇಳೆ ನ್ಯಾಯಾಧೀಶರಾದ ರವಿ ಎದುರೇ ಬ್ಲೇಡ್ನಿಂದ ಗಂಟಲು ಕತ್ತರಿಸಿಕೊಂಡಿದ್ದಾನೆ. ಜತೆಗೆ ಅಧಿಕಾರಿಗಳು ತನ್ನತ್ತ ಹಿಂಸಿಸುತ್ತಿದ್ದಾರೆ ಎಂದು ತಿಳಿಸಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಇದರ ವಿಚಾರಣೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.