ಕರ್ನಾಟಕ

karnataka

ETV Bharat / bharat

ದಲೈಲಾಮ 86ನೇ ಹುಟ್ಟುಹಬ್ಬ : ಶುಭಾಶಯ ತಿಳಿಸಿದ ಪ್ರಧಾನಿ ಮೋದಿ - ಹಿಮಾಚಲ ಪ್ರದೇಶದ ಧರ್ಮಶಾಲಾ

ಈ ಬಾರಿ ಕೊರೊನಾ ಹಿನ್ನೆಲೆ ಕೇಂದ್ರ ಟಿಬೆಟಿಯನ್ ಆಡಳಿತದ ಅತ್ಯುನ್ನತ ಕಾರ್ಯನಿರ್ವಾಹಕ ಕಚೇರಿಯಾದ ಕಶಾಗ್(ಕ್ಯಾಬಿನೆಟ್) ಯಾವುದೇ ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ..

Dalai Lama
ದಲೈಲಾಮ 86ನೇ ಹುಟ್ಟುಹಬ್ಬ

By

Published : Jul 6, 2021, 1:59 PM IST

ನವದೆಹಲಿ :ಇಂದು ಬೌದ್ಧ ಧರ್ಮಗುರು ದಲೈಲಾಮ ಅವರ 86ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ದಲೈಲಾಮ ಅವರಿಗೆ ಶುಭಾಶಯ ತಿಳಿಸಿದ್ದಾರೆ.

"ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಲಭಿಸಲಿ" ಎಂದು ಶುಭ ಹಾರೈಸಿದ್ದಾರೆ. ಇನ್ನು, ಧರ್ಮಶಾಲಾದಲ್ಲಿ 14ನೇ ದಲೈಲಾಮಾ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪ್ರತಿ ವರ್ಷ ಅವರ ಜನ್ಮದಿನಾಚರಣೆಗಳನ್ನು ಟಿಬೆಟಿಯನ್ ಸಮುದಾಯವು ಹಬ್ಬದಂತೆ ಆಚರಣೆ ಮಾಡುತ್ತದೆ. ಪ್ರತಿ ವರ್ಷವೂ ಮೆಕ್‌ಲಿಯೋಡ್‌ಗಂಜ್​ನಲ್ಲಿರುವ ಸುಗ್ಲಾಗ್‌ಖಾಂಗ್‌ನಲ್ಲಿ ಹುಟ್ಟುಹಬ್ಬ ಮಾಡಲಾಗುತ್ತದೆ.

ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಕೇಂದ್ರ ಟಿಬೆಟಿಯನ್ ಆಡಳಿತದ ಅತ್ಯುನ್ನತ ಕಾರ್ಯನಿರ್ವಾಹಕ ಕಚೇರಿಯಾದ ಕಶಾಗ್(ಕ್ಯಾಬಿನೆಟ್) ಯಾವುದೇ ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ.

ABOUT THE AUTHOR

...view details