ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನವನ್ನು ತೋರಿ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಅದರಲ್ಲೂ ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಅತ್ಯದ್ಭುತ ಸಾಧನೆಗೆ ದೇಶ ಬೆರಗಾಗಿದ್ದು, ಮುಂದಿನ ಕ್ರೀಡಾಕೂಟಗಳಿಗೆ ಪ್ರೇರಣೆ ನೀಡಿದೆ.
ಈ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಈ ಕ್ರೀಡಾಕೂಟ ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುತ್ತದೆ. ಮುಂದಿನ ತಲೆಮಾರುಗಳ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ. ಭಾರತೀಯ ತಂಡಗಳ ಪ್ರತಿಯೊಬ್ಬ ಸದಸ್ಯರು ಚಾಂಪಿಯನ್ಗಳಾಗಿದ್ದು, ಎಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.
ಪ್ಯಾರಾಲಿಂಪಿಕ್ಸ್ನಲ್ಲಿ ದೇಶ ಗೆದ್ದ ಪದಕಗಳ ಸಂಖ್ಯೆ ನಮ್ಮ ಹೃದಯವನ್ನು ಸಂತೋಷದಿಂದ ತುಂಬಿಸುತ್ತದೆ. ಆಟಗಾರರಿಗೆ ನೀಡಿದ ಬೆಂಬಲಕ್ಕಾಗಿ ಕ್ರೀಡಾಪಟುಗಳ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಪ್ರಶಂಸಿಸುತ್ತೇನೆ. ಆಟಗಾರರು ತಮ್ಮ ಯಶೋಗಾಥೆಯನ್ನು ಮುಂದುವರೆಸಲು ಆಶಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ನಾನು ಮೊದಲೇ ಹೇಳಿದಂತೆ, ಜಪಾನ್‌ನ ಜನರು, ವಿಶೇಷವಾಗಿ ಜಪಾನ್ ಸರ್ಕಾರವು ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀಡಿದ ಆತಿಥ್ಯ ಅಸಾಧಾರಣ. ಅವರು ಒಲಿಂಪಿಕ್ಸ್ ಆಯೋಜಿಸಿ, ಒಗ್ಗಟ್ಟಿನ ಸಂದೇಶವನ್ನು ಹರಡಿರುವುದನ್ನು ಎಲ್ಲರೂ ಮೆಚ್ಚಬೇಕಾದದು ಎಂದು ಮೋದಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ:Tokyo Paralympics: ಸಮಾರೋಪ ಸಮಾರಂಭಕ್ಕೆ ಭಾರತದ ಧ್ವಜ ಹಿಡಿದು ಬಂದ ದ್ವಿಪದಕ ವಿಜೇತೆ ಅವನಿ ಲೇಖರಾ