ಕರ್ನಾಟಕ

karnataka

ETV Bharat / bharat

ಪೂಜಾರಿಯನ್ನು ಕಟ್ಟಿ ಹಾಕಿ 100 ವರ್ಷ ಹಳೆಯ ಗಣೇಶನ ಮೂರ್ತಿ ಕದ್ದ ಕಳ್ಳರು

ನೂರು ವರ್ಷಗಳಷ್ಟು ಹಳೆಯದಾದ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು ಖದೀಮರು ಬೆಲೆಬಾಳುವ ಗಣೇಶನ ಮೂರ್ತಿ ಹೊತ್ತೊಯ್ದಿದ್ದಾರೆ.

Etv Bharat
Etv Bharat

By

Published : Aug 26, 2022, 7:47 PM IST

Updated : Aug 26, 2022, 7:56 PM IST

ಬಿಲಾಸ್​​ಪುರ(ಛತ್ತೀಸ್​​​ಗಢ):ಅರ್ಪಾ ನದಿಯ ದಡದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಪ್ರಸಿದ್ಧ ಭನ್ವಾರ್ ಗಣೇಶ ದೇವಾಲಯದಲ್ಲಿ ಕಳ್ಳತನವಾಗಿದೆ. ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯವಾದ ಗಣೇಶನ ವಿಗ್ರಹ ಹೊತ್ತೊಯ್ದಿದ್ದಾರೆ.

ಮಸ್ತೂರಿನಲ್ಲಿ ಗ್ರಾನೈಟ್‌ನಿಂದ ತಯಾರಿಸಿರುವ ಪುರಾತನ ಗಣೇಶ ಮೂರ್ತಿ ವಿಗ್ರಹ ಇದಾಗಿದೆ. ದೇಗುಲದ ಪೂಜಾರಿಯನ್ನು ಕಟ್ಟಿ ಹಾಕಿದ್ದು, ಕಿರುಚಾಡದ ರೀತಿಯಲ್ಲಿ ಬಾಯಿಗೆ ಟೇಪ್​​ನಿಂದ ಸುತ್ತಿದ್ದಾರೆ. ತದನಂತರ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಗ್ರಾಮಸ್ಥರು ಪೂಜೆಗೆಂದು ದೇವಸ್ಥಾನದೊಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೂಜಾರಿಯ ಪರಿಸ್ಥಿತಿ ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದರು. ಗರ್ಭಗುಡಿಯಲ್ಲಿ ವಿಗ್ರಹ ಇಲ್ಲದಿರುವುದನ್ನು ನೋಡಿರುವ ಗ್ರಾಮಸ್ಥರು ಘಟನೆಯ ಬಗ್ಗೆ ಮಸ್ತೂರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಕಳ್ಳತನ ಆರೋಪ ಹೊರಿಸಿ ಭೀಕರ ಹಲ್ಲೆ, ನೀರು ಕೇಳಿದ್ರೆ ಮೂತ್ರ ಕುಡಿಸಿ ಅಮಾನವೀಯತೆ

ಗಣೇಶನ ವಿಗ್ರಹ ಮೂರು ಅಡಿ ಎತ್ತರವಿದ್ದು, 65 ಕೆಜಿ ತೂಕವಿತ್ತು. ಸುತ್ತಮುತ್ತಲಿನ ಗ್ರಾಮಸ್ಥರಿಗೆ ದೇಗುಲದ ಮೇಲೆ ಅಪಾರ ನಂಬಿಕೆ ಇದ್ದು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Aug 26, 2022, 7:56 PM IST

ABOUT THE AUTHOR

...view details