ಮುಂಬೈ:ಬಾಲಿವುಡ್ ನಟಿ ಶರ್ಲಿನ್ ಚೋಪ್ರಾ ಅವರನ್ನು ರಾಜ್ ಕುಂದ್ರಾ ಅವರ ಪೋರ್ನೋಗ್ರಫಿ ಪ್ರಕರಣದಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದು, ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದ್ದಾರೆ.
ಶುಕ್ರವಾರ ಮುಂಬೈ ಪೊಲೀಸ್ನ ಪ್ರಾಪರ್ಟಿ ಸೆಲ್ ರಾತ್ರಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಅವರೊಂದಿಗೆ ಇದ್ದ ಸಂಪರ್ಕದ ಬಗ್ಗೆ ಪ್ರಶ್ನೆ ಮಾಡಲಾಗಿದೆ.
ಆರ್ಮ್ಪ್ರೈಮ್ ಮೀಡಿಯಾದ ಬಗ್ಗೆಯೂ ಪೊಲೀಸರು ಪ್ರಶ್ನಿಸಿದ್ದು, ಅದರಲ್ಲಿನ ನಿಯಮಗಳು ಮತ್ತು ಷರತ್ತುಗಳೇನು? ಎಷ್ಟು ವಿಡಿಯೋಗಳನ್ನು ಆರ್ಮ್ಸ್ಪ್ರೈಮ್ನಲ್ಲಿ ಚಿತ್ರೀಕರಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ.
ಶೆರ್ಲಿನ್ ಚೋಪ್ರಾ ಇದೇ ವರ್ಷ ಏಪ್ರಿಲ್ನಲ್ಲಿ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದ ಅವರು ರಾಜ್ ಕುಂದ್ರಾ ಅವರ ಪೋರ್ನೋಗ್ರಫಿ ಪ್ರಕರಣದಲ್ಲಿನ ಬಲಿಪಶುಗಳಾದ ಮಹಿಳೆಯರ ನೆರವಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:'ಬಡವ ರಾಸ್ಕಲ್' ಸಿನಿಮಾಗೆ ಡಾಲಿ ಧನಂಜಯ್ 'ಉಡುಪಿ ಹೋಟೆಲ್..' ಹಾಡು