ಕರ್ನಾಟಕ

karnataka

ETV Bharat / bharat

ಚಳಿಗಾಲದಲ್ಲಿ ಸತಾಯಿಸುವ ಸುಗಂಧದ ಅಲರ್ಜಿ.. ಮುಂಜಾಗ್ರತೆಗೆ ಪರಿಸರತಜ್ಱರ ಸಲಹೆ: ಇದರ ಹಿಂದಿದೆ ನಿಸರ್ಗದ ರೋಚಕ ಕಥೆ!

ಚಳಿಗಾಲದಲ್ಲಿ ಪರಾಗ ಅಲರ್ಜಿ ಜನರನ್ನು ಕಾಡುವುದು ಸಹಜ. ಪರಿಸರ ತಜ್ಞರ ಪ್ರಕಾರ ಇದು ಶೀತದಿಂದ ಆಗುವುದು ಅಲ್ಲ. ಇದರ ಹಿಂದೆ ನಿಸರ್ಗದ ಪವಾಡವೂ ಇದೆ ಎಂದು ತಿಳಿದು ಬಂದಿದೆ. ವಿಶ್ವದ ಪ್ರತಿ ಐದು ಜನರಲ್ಲಿ ಇಂದು ಒಬ್ಬರು ಪರಾಗ ಅಲರ್ಜಿಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಾಗ ಕಣ ಅಥವಾ ಪರಾಗ ಅಲರ್ಜಿ ಜ್ವರ ಎಂತಲೂ ಕರೆಯುವುದುಂಟು

pollen allergy
ಪರಾಗ ಅಲರ್ಜಿ

By

Published : Dec 15, 2022, 4:13 PM IST

ಚಂಡೀಗಢ:ಚಳಿಗಾಲದಲ್ಲಿ ಪರಾಗ ಅಲರ್ಜಿ ಜನರನ್ನು ಕಾಡುವುದು ಸಹಜ. ಇದಕ್ಕೆ ಕನ್ನಡದಲ್ಲಿ ಪುಷ್ಪಧೂಳಿನ ಅಲರ್ಜಿ ಅಂತಲೂ ಕರೆಯಬಹುದಾಗಿದೆ (pollen allergy). ಪರಾಗ ಅಲರ್ಜಿಯಿಂದ ಮೂಗು ಸೋರುವಿಕೆ, ಉಸಿರಾಟದ ತೊಂದರೆ ಮತ್ತು ತಲೆನೋವಿನ ಸಮಸ್ಯೆ, ಬಹಳಷ್ಟು ಜನರು ಅಸ್ತಮಾ ಸಮಸ್ಯೆಗೂ ಒಳಗಾಗಬಹುದು. ಇದೆಲ್ಲವೂ ಚಳಿಯಿಂದಲೇ ಆಗುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.

ಚಂಡೀಗಢಕ್ಕೆ ಆಸ್ಟ್ರೇಲಿಯಾ ಕ್ವೀನ್ಸ್‌ಲ್ಯಾಂಡ್ ವಿವಿ ತಂಡ

ಆದರೆ. ಪರಿಸರ ತಜ್ಞರ ಪ್ರಕಾರ ಇದು ಶೀತದಿಂದ ಆಗುವ ಅಲರ್ಜಿ ಅಲ್ಲ. ಇದರ ಹಿಂದೆ ನಿಸರ್ಗದ ಪವಾಡವೂ ಇದೆ ಎಂಬುದನ್ನು ನಿಸರ್ಗ ತಜ್ಞರು ಕಂಡುಕೊಂಡಿದ್ದಾರೆ. ವಿಶ್ವದ ಪ್ರತಿ ಐದು ಜನರಲ್ಲಿ ಇಂದು ಒಬ್ಬರು ಪರಾಗ ಅಲರ್ಜಿಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪರಾಗ ಕಣ ಅಥವಾ ಪರಾಗ ಅಲರ್ಜಿ ಜ್ವರ ಎಂತಲೂ ಕರೆದುಕೊಂಡು ಬರಲಾಗುತ್ತಿದೆ.

ಚಳಿಗಾಲದಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ. ನೀವು ಉದ್ಯಾನದ ಮೂಲಕ ಹಾದು ಹೋದರೆ, ಅದರ ಸುತ್ತಲೂ ವರ್ಣರಂಜಿತ ಕಾಲೋಚಿತ ಹೂವುಗಳ ಆರ್ದ್ರ ಸುಗಂಧವು ನಿಮ್ಮ ಗಮನ ಸೆಳೆಯುತ್ತದೆ. ಈ ಸುಗಂಧವು ಸಾಮಾನ್ಯವಾಗಿ ಕೆಲವು ಜನರಿಗೆ ಅಲರ್ಜಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಪರಾಗ ಅಲರ್ಜಿ ಎಂದರೇನು? ಹೂವುಗಳಲ್ಲಿ ಪರಾಗ ಎಂಬ ಸೂಕ್ಷ್ಮವಾದ ಪುಡಿ ಅಂಶವಿದೆ. ಹೂವುಗಳು ಅಥವಾ ಯಾವುದೇ ರೀತಿಯ ಸಸ್ಯವರ್ಗ ಫಲವತ್ತಾಗಿಸಲು ಇದು ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ಮರಗಳು ಮತ್ತು ಸಸ್ಯಗಳ ಹೂವುಗಳು, ಹಣ್ಣುಗಳು ಬೆಳವಣಿಗೆಯೂ ಅಧಿಕವಾಗಿರುವುದು.

ಚಿಟ್ಟೆ, ಜೇನುನೊಣ, ಪಕ್ಷಿಗಳು ಮತ್ತಿತರ ಕೀಟಗಳು ಒಂದು ಹೂವಿನ ಮೇಲೆ ಕುಳಿತ ನಂತರ ಅವು ಮತ್ತೊಂದು ಹೂವಿನ ಹಾರಿಕೊಂಡು ಬಳಿಗೆ ಹೋಗುತ್ತವೆ. ಆಗ ಅವುಗಳ ಪಾದಗಳಿಗೆ ಅಂಟಿಕೊಂಡಿರುವ ಪರಾಗ ಕಣಗಳು ಅದೇ ಜಾತಿಯ ಮತ್ತೊಂದು ಹೂವನ್ನು ಫಲವತ್ತಾಗಿಸಲು ಕೆಲಸ ಮಾಡುತ್ತದೆ.

ಈ ಪರಾಗಗಳು ಈ ವೇಳೆ ಗಾಳಿಯಲ್ಲಿ ತೇಲುತ್ತವೆ. ಪರಾಗಗಳು ಗಾಳಿಯಲ್ಲಿ ಸೇರಿಕೊಂಡ ಬಳಿಕ ವ್ಯಕ್ತಿಯ ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಹೋಗುತ್ತವೆ. ವ್ಯಕ್ತಿಯ ದೇಹವು ಅವುಗಳನ್ನು ಸ್ವೀಕರಿಸುವುದಿಲ್ಲ. ಆದರೆ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳ ವಿರುದ್ಧ ಹೋರಾಡಲು ಎಚ್ಚರಿಸುತ್ತದೆ. ಅದರ ಪರಿಣಾಮವಾಗಿ, ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆ ತಕ್ಷಣವೇ ಪ್ರಾರಂಭವಾಗುತ್ತದೆ.

ಪರಾಗ ಅಲರ್ಜಿ ಲಕ್ಷಣಗಳು: ವಸಂತಕಾಲ ಮತ್ತು ಬೇಸಿಗೆ ಕಾಲದಲ್ಲಿ ಪರಾಗ ಅಲರ್ಜಿ ಹರಡುವಿಕೆ ಅತ್ಯಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ, PGI ಯ ಸಮುದಾಯ ಔಷಧ ವಿಭಾಗ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯ ಪರಿಸರ ತಜ್ಞರು ಈ ಅಲರ್ಜಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗುತ್ತದೆ ಎನ್ನುತ್ತಾರೆ. ಪರಾಗ ಅಲರ್ಜಿಯಿಂದ ಮೂಗಿನ ದಟ್ಟಣೆ, ಸೀನುವಿಕೆ, ಸ್ರವಿಸುವ ಮೂಗು, ನೋಯುತ್ತಿರುವ ಗಂಟಲು ಅಥವಾ ಕಣ್ಣುಗಳಲ್ಲಿ ಉರಿಯುವಿಕೆಯಂಥ ಸಮಸ್ಯೆಗಳನ್ನು ಜನರು ಎದುರಿಸುತ್ತಾರೆ.

ತಡೆಗೆ ಕ್ರಮಗಳು: ಚಂಡೀಗಢದ ಪಿಜಿಐಎಂಇಆರ್ ಮತ್ತು ಸಿಆರ್‌ಐಕೆಸಿ ಸಂಸ್ಥೆಗಳಿಗೆ ಭೇಟಿ ನೀಡಿದ ಆಸ್ಟ್ರೇಲಿಯಾ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆಯ ಸಹ ಪ್ರಾಧ್ಯಾಪಕ ನಿಕ್ ಓಸ್ಬೋರ್ನ್ ಅವರು, ಈ ಅಲರ್ಜಿಗೆ ಸಂಬಂಧಿಸಿದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಹಳ ಹೊತ್ತು ಮನೆಯಿಂದ ಹೊರಗಿದ್ದರೆ ಮನೆಗೆ ಮರಳಿದ ನಂತರ ಬಟ್ಟೆ ಬದಲಿಸಿ ಸ್ನಾನ ಮಾಡಿ ಶಾಂಪೂವಿನಿಂದ ತಲೆತೊಳೆದುಕೊಳ್ಳಿ ಎಂದರು. ಚಳಿಗಾಲದಲ್ಲಿ ಕಿಟಕಿಗಳನ್ನು ಮುಚ್ಚಿ, ನಿಮ್ಮ ಬಟ್ಟೆಗಳನ್ನು ಹೊರಗೆ ಒಣಗಿಸುವ ಬದಲು ಬಟ್ಟೆ ಡ್ರೈಯರ್‌ನಲ್ಲಿ ಒಣಗಿಸಬೇಕು. ಇದರೊಂದಿಗೆ, ಗಂಭೀರ ಸ್ಥಿತಿಯಲ್ಲಿರುವ ಜನರು ವೈದ್ಯರ ಸಲಹೆಯೊಂದಿಗೆ ಫೆಕ್ಸೊಫೆನಾಡಿನ್, ಲೊರಾಟಾಡಿನ್ ಮುಂತಾದ ಮಾದಕ ರಹಿತ ಆಂಟಿಹಿಸ್ಟಮೈನ್‌ಗಳನ್ನು ಸಹ ಬಳಸಬಹುದು. ಹೆಚ್ಚಿನ ಮಕ್ಕಳಲ್ಲಿ ಈ ಅಲರ್ಜಿ ತ್ವರಿತವಾಗಿ ಹರಡುತ್ತದೆ. 40 ವರ್ಷ ಮೇಲ್ಪಟ್ಟವರಲ್ಲೂಈ ಬಗ್ಗೆ ದೂರುಗಳಿವೆ.

ಇದನ್ನೂಓದಿ:ವ್ಯಾಯಾಮ, ಧ್ಯಾನ ವೃದ್ಧರಲ್ಲಿ ಅರಿವಿನ ಸಾಮರ್ಥ್ಯವನ್ನ ಸುಧಾರಿಸುವುದಿಲ್ಲವಂತೆ !

ABOUT THE AUTHOR

...view details