ಕರ್ನಾಟಕ

karnataka

ETV Bharat / bharat

ಜೈಪುರದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸ್​ ದಾಳಿ: ಕರ್ನಾಟಕದ ಅಧಿಕಾರಿಗಳು ಸೇರಿ 84 ಮಂದಿ ಅರೆಸ್ಟ್​ - ಕ್ಯಾಸಿನೊ

ಫಾರ್ಮ್ ಹೌಸ್‌ವೊಂದರಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಜೈಪುರ ಪೊಲೀಸ್ ಕಮಿಷನರೇಟ್ ತಂಡ ಶನಿವಾರ ದಾಳಿ ನಡೆಸಿದೆ. ಘಟನಾ ಸ್ಥಳದಿಂದ 13 ಹುಡುಗಿಯರು ಸೇರಿದಂತೆ 84 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Police raids casino liquor dance party
ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸರ ದಾಳಿ

By

Published : Aug 21, 2022, 9:28 PM IST

Updated : Aug 21, 2022, 10:55 PM IST

ಜೈಪುರ: ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಜೈಪುರ ಪೊಲೀಸ್ ಕಮಿಷನರೇಟ್ ವಿಶೇಷ ತಂಡ ಶನಿವಾರ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಘಟನಾ ಸ್ಥಳದಿಂದ 13 ಹುಡುಗಿಯರು ಸೇರಿದಂತೆ 84 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕರ್ನಾಟಕದ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸರ ದಾಳಿ

ಘಟನಾ ಸ್ಥಳದಿಂದ 9 ಹುಕ್ಕಾಗಳು, 21 ಜೋಡಿ ಕಾರ್ಡ್‌ಗಳು, 7 ಟೇಬಲ್‌ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಮತ್ತು 23 ಲಕ್ಷದ 71 ಸಾವಿರದ 408 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ತೆಲಂಗಾಣ, ಹರಿಯಾಣ, ಪಂಜಾಬ್, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದ ನಿವಾಸಿಗಳು ಎಂದು ತಿಳಿದುಬಂದಿದೆ. ಇದರಲ್ಲಿ ಕರ್ನಾಟಕದ ಪೊಲೀಸ್ ಇನ್​​ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸರ ದಾಳಿ

ದಾಳಿಯ ವೇಳೆ ಅಲ್ಲಿನ ದೃಶ್ಯ ನೋಡಿ ಒಂದು ಕ್ಷಣ ಪೊಲೀಸರೇ ಬೆರಗಾಗಿದ್ದಾರೆ. ಎಲ್ಲರೂ ಕುಡಿದು ಸಿನಿಮಾ ಹಾಡುಗಳಿಗೆ ಡ್ಯಾನ್ಸ್​ ಮಾಡುತ್ತಿದ್ದರು. ಫಾರ್ಮ್ ಹೌಸ್‌ನಲ್ಲಿ ಆಲ್ಕೋಹಾಲ್ ನೀಡುವುದರ ಜೊತೆಗೆ 5 ಟೇಬಲ್‌ಗಳಲ್ಲಿ ಡ್ಯಾನ್ಸ್ ಪಾರ್ಟಿಯೊಂದಿಗೆ ಆನ್‌ಲೈನ್ ಕ್ಯಾಸಿನೊ ಸಹ ನಡೆಯುತ್ತಿತ್ತು. ಅಲ್ಲದೇ ಅಲ್ಲಿದ್ದವರು ಹುಕ್ಕಾ ಸಹ ಹೊಡೆಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ದೆಹಲಿಯ ಈವೆಂಟ್ ಕಂಪನಿಯೊಂದು ಫಾರ್ಮ್ ಹೌಸ್​ನ್ನು 2 ದಿನ ಬಾಡಿಗೆಗೆ ಪಡೆದು, ಕ್ಯಾಸಿನೊ ಜೊತೆಗೆ ಜೂಜಾಟ ಸಹ ನಡೆಸುತ್ತಿತ್ತು. ಜೂಜು ಆಡುತ್ತಿದ್ದವರಲ್ಲಿ ಅನೇಕರು ದೊಡ್ಡ ದೊಡ್ಡ ಕುಳಗಳೇ ಆಗಿದ್ದಾರೆ.

ಇದನ್ನೂ ಓದಿ:ಅಸ್ಸಾಂ: ಅಲ್​ಖೈದಾ ಜೊತೆ ನಂಟು ಹೊಂದಿದ್ದ ಇಬ್ಬರು ಇಮಾಮ್​ಗಳ ಬಂಧನ

ಹೆಚ್ಚುವರಿ ಪೊಲೀಸ್ ಕಮಿಷನರ್ ಕ್ರೈಂ ಅಜಯ್‌ಪಾಲ್ ಲಂಬಾ ಅವರು ಈ ಕುರಿತು ಮಾತನಾಡಿ, ಪಾರ್ಟಿಯಲ್ಲಿ ಇರುವವರಿಗೆ ಹೊರಗಿನಿಂದ ಮಹಿಳೆಯರನ್ನು ಒದಗಿಸಲಾಗುತ್ತಿತ್ತು. ಈವೆಂಟ್ ಮ್ಯಾನೇಜರ್ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್, ಅವರ ಮಗ ಮನ್ವೇಶ್, ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ, ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿ ಮನೀಶ್ ನೇಪಾಳದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

Last Updated : Aug 21, 2022, 10:55 PM IST

ABOUT THE AUTHOR

...view details