ನವದೆಹಲಿ: ಬರೋಬ್ಬರಿ 41 ವರ್ಷಗಳ ಬಳಿಕ ಇಂದು ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪ್ರತೀದಿನ ತಪ್ಪದೆ ಮಾಡುವ ತಮ್ಮ ಯೋಗಾಭ್ಯಾಸವನ್ನು ಇಂದು ಸ್ಕಿಪ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Tokyo Olympics: ಹಾಕಿ ಪಂದ್ಯ ವೀಕ್ಷಿಸಲು ಯೋಗಾಭ್ಯಾಸ ಸ್ಕಿಪ್ ಮಾಡಿದ ಪ್ರಧಾನಿ ಮೋದಿ
ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದು, ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಯೋಗಾಭ್ಯಾಸವನ್ನು ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಗಾಭ್ಯಾಸ ತೊರೆದ ಪ್ರಧಾನಿ ಮೋದಿ
ಸಾಮಾನ್ಯವಾಗಿ ಪ್ರಧಾನಿ ಮೋದಿ ಯೋಗವನ್ನು ದೈನಂದಿನ ಚಟುವಟಿಕೆಯಾಗಿ ಮಾಡುತ್ತಾರೆ. ಎಂತಹದ್ದೇ ಸಂದರ್ಭದಲ್ಲಿಯೂ ಯೋಗ ತ್ಯಜಿಸುತ್ತಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಹಾಕಿ ಪಂದ್ಯ ವೀಕ್ಷಿಸಲು ಯೋಗಾಭ್ಯಾಸ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ.