ಕರ್ನಾಟಕ

karnataka

By ETV Bharat Karnataka Team

Published : Dec 19, 2023, 12:23 PM IST

ETV Bharat / bharat

ವಾರಣಾಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಸ್ವಸಹಾಯ ಸಂಘದ ಮಹಿಳೆಗೆ ಮೋದಿ ಆಫರ್!

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸ್ವಸಹಾಯ ಸಂಘದ ಮಹಿಳೆಗೆ ಪ್ರಧಾನಿ ಆಫರ್​ ನೀಡಿದ್ದಾರೆ.

ಮಹಿಳೆಗೆ ಪ್ರಧಾನಿ ಮೋದಿ ಆಫರ್
ಮಹಿಳೆಗೆ ಪ್ರಧಾನಿ ಮೋದಿ ಆಫರ್

ವಾರಣಾಸಿ (ಉತ್ತರ ಪ್ರದೇಶ): ಸುಮಾರು 19,150 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆಂದು ಪ್ರಧಾನಿ ಮೋದಿ ಅವರು ಎರಡು ದಿನ ವಾರಣಾಸಿ ಪ್ರವಾಸ ಕೈಗೊಂಡಿದ್ದರು.

ತಮ್ಮ ಪ್ರವಾಸದ ಎರಡನೇ ದಿನದಂದು ಪ್ರಧಾನಿ ಮೋದಿಯವರು ವಾರಣಾಸಿಯ ಸೇವಾಪುರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ 'ಮೇರಿ ಕಹಾನಿ-ಮೇರಿ ಜುಬಾನಿ' (ನನ್ನ ಕಥೆ- ನನ್ನ ಮಾತು) ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಸಹಾಯ ಸಂಘಗಳ ಮಹಿಳಾ ಫಲಾನುಭವಿಗಳು ಪ್ರಧಾನಿ ಅವರಿಗೆ ತಮ್ಮ ಯಶಸ್ಸಿನ ಕಥೆಗಳನ್ನು ಹೇಳಿದರು.

ಈ ವೇಳೆ ಚಂದಾದೇವಿ ಎಂಬ ಮಹಿಳೆ ಮಾಡಿದ ಭಾಷಣ ಪ್ರಧಾನಿ ಮೋದಿ ಸೇರಿದಂತೆ ಎಲ್ಲರ ಗಮನ ಸೆಳೆಯಿತು. ಬಳಿಕ ಆ ಮಹಿಳೆಯೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನೀವು ಅತ್ಯುತ್ತಮವಾಗಿ ಭಾಷಣ ಮಾಡಿದ್ದು 'ಲಖ್​ಪತಿ ದೀದಿ' ಆಗಿದ್ದೀರಿ ಎಂದು ಪ್ರಶಂಸಿಸಿದರು. ನೀವು ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದೀರಾ ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ ಚಂದಾದೇವಿ ನಗುಮೊಗದಿಂದ ಇಲ್ಲ ಎಂದು ಪ್ರತಿಕ್ರಿಯಿಸಿದರು. ನೀವು ಚುನಾವಣೆಗೆ ಸ್ಪರ್ಧಿಸಲು ಬಯಸುವಿರಾ ಎಂದು ಖುದ್ದು ಮೋದಿ ಅವರೇ ಚೆಂದಾದೇವಿಗೆ ಲೋಕಸಭಾ ಚುನಾವಣೆಗೆ ಆಫರ್​ ನೀಡಿದರು. ಆದರೇ ಇದನ್ನು ಚಂದಾದೇವಿ ನಿರಾಕರಿಸಿದರು.

ಬಳಿಕ ಮಾತನಾಡಿದ ಆಕೆ, ನಿಮ್ಮಿಂದಲೇ ನಾವು ಸ್ಫೂರ್ತಿ ಪಡೆದಿದ್ದೇವೆ. ನಿಮ್ಮಂತೆಯೇ ನಾವು ಒಗ್ಗಟ್ಟಾಗಿ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಅನಿಸಿಕೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಸಾಧ್ಯವಾಗಿದ್ದು ನಮ್ಮ ಸೌಭಾಗ್ಯವೇ ಸರಿ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಚಂದಾದೇವಿ ತಮ್ಮ ಸಂತಸವನ್ನು ಹಂಚಿಕೊಂಡರು.

ನಂತರ ಪ್ರಧಾನಿ ಮೋದಿ ಅವರು ಗ್ರಾಮದ ಮಹಿಳೆಯರು ಮತ್ತು ಸ್ವಸಹಾಯ ಸಂಘಗಳ ಮಹಿಳೆಯರೊಂದಿಗೂ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಅವರು ಗ್ರಾಮದ ಜನರೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಾಮಾನ್ಯರಂತೆ ಕುಳಿತು ಗಮನಸೆಳೆದರು.

ಮೋದಿ ಪ್ರಸ್ತಾಪಿತ 'ಲಖ್​​ಪತಿ ದೀದಿ' ಏನು ಗೊತ್ತಾ:ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಕೇಂದ್ರ ಸರ್ಕಾರವು ಸ್ವಸಹಾಯ ಗುಂಪು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಲಖ್​ಪತಿ ದೀದಿ ಯೋಜನೆ ಕೂಡ ಒಂದು. ಈ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡುವ ಮೂಲಕ, ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಮಹಿಳೆಯರು ಸ್ವಾವಲಂಬಿಗಳಾಗುವುದು ಮಾತ್ರವಲ್ಲದೆ ಇತರ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿದೆ.

ಇದನ್ನೂ ಓದಿ:ವಯಸ್ಸು, ಆರೋಗ್ಯ ದೃಷ್ಟಿಯಿಂದ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪಾಲ್ಗೊಳ್ಳದಂತೆ ಅಡ್ವಾಣಿ, ಜೋಶಿಗೆ ಮನವಿ

ABOUT THE AUTHOR

...view details