ಕರ್ನಾಟಕ

karnataka

By

Published : Mar 18, 2023, 5:49 PM IST

ETV Bharat / bharat

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನಕ್ಕೆ ಚಾಲನೆ; ಆರೋಗ್ಯಯುತ ಜೀವನಕ್ಕೆ ದೇಶಿ ಮಿಲ್ಲೆಟ್​

ಖಾರಿಫ್​ ಬೆಳೆಯಾಗಿ ಭಾರತದಲ್ಲಿ ಈ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಆರೋಗ್ಯ ವೃದ್ಧಿಯಲ್ಲಿ ಪ್ರಮುಖವಾಗಿರುವ ಈ ಸಿರಿಧಾನ್ಯಗಳು ಪ್ರಾಮುಖ್ಯತೆಗೆ ಒತ್ತು ನೀಡಲಾಗಿದೆ.

pm-narendra-modi-inaugurates-global-millets-shree-anna-conference
pm-narendra-modi-inaugurates-global-millets-shree-anna-conference

ನವದೆಹಲಿ: ಸಿರಿಧಾನ್ಯಗಳ ಕುರಿತ ಎರಡು ದಿನಗಳ ಜಾಗತಿಕ ಸಮ್ಮೇಳನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ವೇಳೆ 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷವಾಗಿ ಆಚರಿಸುತ್ತಿರುವ ಹಿನ್ನೆಲೆ ಅದರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಭಾರತದ ಮನವಿ ಹಿನ್ನೆಲೆ ವಿಶ್ವಸಂಸ್ಥೆ 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿ, ಈ ಬಗ್ಗೆ ಜಾಗತಿಕ ಅರಿವು ಮೂಡಿಸಲು ಮುಂದಾಗಿದೆ. ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ ಇಂದಿನಿಂದ ಆರಂಭವಾಗಿದೆ.

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ-2023 ಆಚರಣೆ ಮುನ್ನಡೆಸಲು ಭಾರತಕ್ಕೆ ವಿಶ್ವಸಂಸ್ಥೆ ಅವಕಾಶ ನೀಡಿದೆ. ಈ ಹಿನ್ನೆಲೆ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯಲ್ಲಿ ಸಿರಿಧಾನ್ಯದ ಅರಿವು ಮೂಡಿಸುವ, ಪ್ರಚಾರ ನಡೆಸುವ ಕಾರ್ಯಕ್ರಮವನ್ನು ವರ್ಷಾದ್ಯಂತ ಆಚರಿಸಲಾಗುತ್ತಿದೆ. ಸುಗ್ಗಿಯ ಬಳಿಕ ಮೌಲ್ಯವರ್ಧನೆ, ದೇಶಿಯ ಬಳಕೆ ಹೆಚ್ಚಿಸುವುದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಗಿ ಉತ್ಪನ್ನಗಳ ಬ್ರ್ಯಾಂಡಿಂಗ್‌ಗೆ ನೆರವು ನೀಡಲಾಗುವುದು. ಸಿರಿಧಾನ್ಯಗಳನ್ನು ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಬೆಳೆಯಲಾಗುತ್ತದೆ. ಭಾರತವು ಇದರ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ನೈಜೀರಿಯಾ ಮತ್ತು ಚೀನಾ ಇದೆ.

ಸಿರಿ ಧಾನ್ಯ ಉತ್ಪಾದಿಸುವ ಪ್ರದೇಶಗಳು
ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ಖಾರಿಫ್​ ಬೆಳೆ: ಸಹಾರನ್ ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಸಿರಿಧಾನ್ಯಗಳು ಇನ್ನೂ ಸಾಂಪ್ರದಾಯಿಕ ಆಹಾರದ ಭಾಗವಾಗಿವೆ. ಭಾರತ 2020ರಲ್ಲಿ ಶೇ 41ರಷ್ಟು ಸಿರಿಧಾನ್ಯಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದಕವಾಗಿದೆ. ಖಾರಿಫ್​ ಬೆಳೆಗಳಲ್ಲಿ 9 ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುವುದು. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಇದರ ಉತ್ಪಾದನೆ ಹೆಚ್ಚಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ಹೈದರಾಬಾದ್‌ನ ರಾಜೇಂದ್ರನಗರ ಮಂಡಲದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR - ಇಂಡಿಯನ್ ಮಿಲೆಟ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಅನ್ನು ಸ್ಥಾಪಿಸಲಾಗಿದೆ.

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ಖಾರಿಫ್​ ಬೆಳೆಯಾಗಿ ಭಾರತದಲ್ಲಿ ಈ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಪ್ರಸ್ತುತ 130 ದೇಶಗಳಲ್ಲಿ ಇದರ ಉತ್ಪಾದನೆ ನಡೆಯುತ್ತಿದೆ. ಭಾರತ ಮತ್ತು ಏಷ್ಯಾದ 500 ಕ್ಕಿಂತಲೂ ಹೆಚ್ಚಿನ ಜನರ ಸಂಪ್ರಾದಾಯಿಕ ಆಹಾರ ಇದಾಗಿದೆ. ಈ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಇದರಲ್ಲಿ ಪ್ರೋಟಿನ್​ ಹೆಚ್ಚಿದೆ.

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ಸಿರಿಧಾನ್ಯದ ಪ್ರಯೋಜನ..ಆರೋಗ್ಯಕರ ಪೌಷ್ಠಿಕಯುಕ್ತ ಡಯಟ್​ ಇದಾಗಿದೆ. ಯಾವುದೇ ಋತುಮಾನಕ್ಕೂ ಹೊಂದಿಕೆಯಾಗುವ ಆಹಾರ ಮತ್ತು ರೈತರ ಜೀವಿತಾವಧಿ ಹೆಚ್ಚಳಕ್ಕೆ ಸಹಾಯಕವಾಗಲಿದೆ. ಅಲ್ಲದೆ,

ಜಗತ್ತಿನ ಆಹಾರ ವ್ಯವಸ್ಥೆಯ ವೈವಿದ್ಯತೆ ಈ ಮೂಲಕ ಸುಧಾರಿಸುತ್ತದೆ.

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ಹಲವು ರೀತಿಯಲ್ಲಿ ಈ ಸಿರಿಧಾನ್ಯಗಳನ್ನು ಬಳಕೆ..ಸಿರಿಧಾನ್ಯದಲ್ಲಿ ಪ್ರಮುಖವಾಗಿ ಮೂರು ವಿಧ: ಜೋಳ, ಬಜ್ರಾ, ರಾಗಿ

ಸಣ್ಣ ಸಿರಿಧಾನ್ಯಗಳಲ್ಲಿ ಐದು ಬಗೆ: ಸಜ್ಜೆ, ನವಣೆ, ಸಾವೆ, ಊದಲು, ಅರಕ

2023ರ ಆರ್ಥಿಕ ಸಮೀಕ್ಷೆಯಲ್ಲಿ ಏಷ್ಯಾದಲ್ಲಿ ಜಾಗತಿಕ ಉತ್ಪಾದನೆಯಲ್ಲಿ ಶೇ 80 ಮತ್ತು ಶೇ 20ರಷ್ಟು ಸಿರಿಧಾನ್ಯ ಉತ್ಪಾದಿಸುತ್ತಿದೆ. ಸಿರಿಧಾನ್ಯ ಇಳುವರಿ ಭಾರತದಲ್ಲಿ 1239 ಕೆಜಿ ಹೆಕ್ಟೇರ್​​​ ಇದ್ದು, ಜಾಗತಿಕ ಸರಾಸರಿ 1229 ಕೆಜಿ ಹೆಕ್ಟೇರ್​​ ಇದೆ.

ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ

ದೇಶಾದ್ಯಂತ ಸಿರಿಧಾನ್ಯಗಳ ಉತ್ತೇಜನ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಮನವಿ ಮಾಡಿದ್ದಾರೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸ್ಥಿತಿ ಬಲವಾಗುತ್ತದೆ. ಬಜೆಟ್​ನಲ್ಲಿ ಸಿರಿಧಾನ್ಯಗಳನ್ನು ಶ್ರೀ ಅನ್ನ ಎಂದು ಕರೆಯುವ ಮೂಲಕ ಸಿರಿಧಾನ್ಯಗಳ ಅಭಿವೃದ್ಧಿಗೆ ಒತ್ತು ನೀಡಿದೆ. ನಾವು ಅನೇಕರ ರೀತಿಯ ಶ್ರೀ ಅನ್ನಗಳನ್ನು ಬೆಳೆಯುತ್ತಿದ್ದೇವೆ. ಅನಾದಿ ಕಾಲದಿಂದಲೂ ಇದು ನಮ್ಮ ಆಹಾರವಾಗಿದೆ ಎಂದು ತಿಳಿಸಿದರು.

ಸೂಪರ್​ ಫುಡ್​: ಹಲವು ಧಾನ್ಯಗಳಿಂದ ಕೂಡಿದ ಪೌಷ್ಟಿಕಾಂಶಯುಕ್ತವಾದ ಈ ಸಿರಿಧಾನ್ಯಗಳು ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ಅನೇಕ ತಳಿಯ ಸಿರಿಧಾನ್ಯ ಬೆಳೆಯಲಾಗುತ್ತದೆ. ಹವಾಮಾನದ ಬಿಕ್ಕಟ್ಟು, ಅನಿರೀಕ್ಷಿತ ಸವಾಲುಗಳಿಂದ ಜೀವನ ಶೈಲಿ ನಿರ್ವಹಣೆ ಸುಸ್ಥಿರತೆಗೆ ಕೂಡ ಇದು ಪೂರಕವಾಗಿದೆ.

ಡಾ. ಖಾದರ್​ ಭಾರತದಲ್ಲಿ ಸಿರಿಧಾನ್ಯಗಳ ವ್ಯಕ್ತಿ ಎಂದು ಜನಪ್ರಿಯತೆ ಪಡೆದಿದ್ದಾರೆ. ಇವರು ಕೃಷಿಯಲ್ಲಿ ಸಿರಿಧಾನ್ಯಗಳ ಬಳಕೆ ಮಾಡುವಂತೆ ರೈತರಿಗೆ ಕರೆ ನೀಡಿದ್ದಾರೆ. ಸಿರಿಧಾನ್ಯಗಳು ನಮ್ಮ ಡಯಟ್​​ನಲ್ಲಿ ಅಗತ್ಯ ವಸ್ತುವಾಗಬೇಕು. ಆರೋಗ್ಯ ಸಮಸ್ಯೆಗೆ ಗುಡ್​ಬಾಯ್​ ಹೇಳಲು ಸಿರಿಧಾನ್ಯಗಳು ನಿಮ್ಮ ಅಡುಗೆ ಮನೆಯಲ್ಲಿ ಸ್ಥಾನ ಪಡೆಯಬೇಕು. ಸಿರಿಧಾನ್ಯಗಳ ಸೇವನೆಯಿಂದ ರೋಗಗಳನ್ನು ತಡೆಗಟ್ಟಬಹುದು ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಆರೋಗ್ಯ ಪ್ರಯೋಜನಕಾರಿತ್ವ ಮೌಲ್ಯೀಕರಿಸಲು ವಿಜ್ಞಾನಿಗಳ ಕಾರ್ಯ

ABOUT THE AUTHOR

...view details