ಕರ್ನಾಟಕ

karnataka

ETV Bharat / bharat

ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ - ಕುಲು ದಸರಾ ಶುರುವಾದದ್ದು ಹೇಗೆ

ಐತಿಹಾಸಿಕ ಕುಲು ದಸರಾ ಉತ್ಸವದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಭಗವಾನ್ ರಘುನಾಥರ ದರ್ಶನ ಪಡೆದರು.

pm-narendra-modi-in-international-kullu-dussehra-importance-of-kullu-dussehra-festival
ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

By

Published : Oct 5, 2022, 7:59 PM IST

ಕುಲು (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕುಲು ದಸರಾ ಆರಂಭವಾಗಿದೆ. ಇಂದಿನಿಂದ ಒಂದು ವಾರ ಈ ದಸರಾ ನಡೆಯಲಿದ್ದು, ದಸರಾ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.

ಧಾಲ್ಪುರದ ರಥ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಭಗವಾನ್ ರಘುನಾಥರ ದರ್ಶನ ಪಡೆದರು. ಸಾವಿರಾರು ಜನರ ಮಧ್ಯೆಯೇ ರಘುನಾಥರ ದರ್ಶನ ಪಡೆಯಲು ಬಂದಾಗ ಜನರ ಗುಂಪು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದೇ ವೇಳೆ, ಪ್ರಧಾನಿ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಶ್ ಕಶ್ಯಪ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ರಘುನಾಥರ ರಥಯಾತ್ರೆಯನ್ನು ವೀಕ್ಷಿಸಿದರು.

ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ಪ್ರಧಾನಿ ಮೋದಿ ಅವರಿಗೆ ಸಿಎಂ ಜೈರಾಮ್ ಠಾಕೂರ್ ಕುಲು ಟೋಪಿ ಮತ್ತು ಶಾಲು ನೀಡಿ ಗೌರವಿಸಿದರು. ಅದೇ ಸಮಯದಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಪ್ರಧಾನಿ ಮೋದಿ ಹಸ್ತಲಾಘವ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುವಲ್ಲಿ ನಿರತವಾಗಿತ್ತು.

ಕುಲು ದಸರಾ ಹಬ್ಬದ ವಿಶಿಷ್ಟ: ಒಂದು ವಾರ ಕಾಲ ನಡೆಯುವ ಕುಲು ದಸರಾ ಹಬ್ಬವು ವಿಶಿಷ್ಟವಾಗಿದೆ. ಏಕೆಂದರೆ ಇದನ್ನು ದೇಶದ ಉಳಿದ ಭಾಗಗಳಲ್ಲಿ ದಸರಾ ಹಬ್ಬವು ಮುಗಿದ ನಂತರ ಆಯೋಜಿಸಲಾಗುತ್ತದೆ. ಈ ಅದ್ಭುತವಾದ ಹಬ್ಬದಲ್ಲಿ ದೇವಾನುದೇವತೆಗಳು ಸ್ವರ್ಗದಿಂದ ಭೂಮಿಗೆ ಬರುತ್ತಾರೆ ಎಂದು ಜನತೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ.

ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ದೇವರು ಮತ್ತು ದೇವತೆಗಳ ಮಹಾ ಕುಂಭ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಸರಾ, ಬೀಜ್ ಪೂಜೆ ಮತ್ತು ದೇವಿ ಹಿಡಿಂಬಾ, ಬಿಜ್ಲಿ ಮಹಾದೇವ್ ಮತ್ತು ಮಾತಾ ಭೇಖಲಿಯ ಸನ್ನೆಯನ್ನು ಸ್ವೀಕರಿಸಿದ ನಂತರವೇ ಈ ಉತ್ಸವ ಪ್ರಾರಂಭವಾಗುತ್ತದೆ. ನಂತರ ಭಗವಾನ್ ರಘುನಾಥರ ಪಲ್ಲಕ್ಕಿಯನ್ನು ಹೊರತೆಗೆಯಲಾಗುತ್ತದೆ.

ಕುಲು ದಸರಾ ಶುರುವಾದದ್ದು ಹೇಗೆ?:ರಾಜಾ ಜಗತ್ ಸಿಂಗ್ ಆಳ್ವಿಕೆಯಲ್ಲಿ 1637ರಿಂದಲೂ ಈ ಹಬ್ಬವನ್ನು ಆಚರಿಸುವ ಸಂಪ್ರದಾಯ ಇದೆ. ರಾಜಾ ಜಗತ್ ಸಿಂಗ್ ಆಳ್ವಿಕೆಯಲ್ಲಿ ಮಣಿಕರ್ಣ ಕಣಿವೆಯ ತಿಪ್ಪರಿ ಗ್ರಾಮದಲ್ಲಿ ದುರ್ಗದತ್ತ ಎಂಬ ಬಡ ಬ್ರಾಹ್ಮಣ ವಾಸಿಸುತ್ತಿದ್ದ. ರಾಜಾ ಜಗತ್ ಸಿಂಗ್ ಅವರ ಕೆಲವು ತಪ್ಪು ತಿಳಿವಳಿಕೆಯಿಂದಾಗಿ ಆ ಬಡ ಬ್ರಾಹ್ಮಣ ಆತ್ಮಾಹುತಿ ಮಾಡಿಕೊಂಡಿದ್ದ. ಈ ತಪ್ಪಿನ ಅನುಭವ ರಾಜಾ ಜಗತ್ ಸಿಂಗ್ ಅವರಿಗಿತ್ತು ಎಂದು ಹೇಳಲಾಗುತ್ತದೆ.

ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ಅಲ್ಲದೇ, ಇದು ರಾಜಾ ಜಗತ್ ಸಿಂಗ್‌ಗೆ ದೊಡ್ಡ ಆಘಾತ ಉಂಟುಮಾಡಿತು. ಈ ದೋಷದಿಂದಾಗಿ ರಾಜನು ಗುಣಪಡಿಸಲಾಗದ ರೋಗಕ್ಕೆ ಗುರಿಯಾದರು. ಇಂತಹ ಕಾಯಿಲೆಯಿಂದ ಬಳಲುತ್ತಿದ್ದ ರಾಜಾ ಜಗತ್ ಸಿಂಗ್ ಅವರಿಗೆ ಅಯೋಧ್ಯೆಯ ತ್ರೇತಾನಾಥ ದೇವಸ್ಥಾನದಿಂದ ಭಗವಾನ್ ರಾಮಚಂದ್ರ, ಸೀತೆ ಮತ್ತು ರಾಮ ಭಕ್ತ ಹನುಮಾನ್ ವಿಗ್ರಹಗಳನ್ನು ತರಲು ಝಿಡಿಯ ಅರ್ಚಕ ಬಾಬಾ ಕಿಶನ್ ದಾಸ್ ಸಲಹೆ ನೀಡಿದ್ದರು. ಕುಲುವಿನ ದೇವಾಲಯದಲ್ಲಿ ಈ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ ರಾಜ ದೋಷ ಮುಕ್ತರಾಗುತ್ತಾರೆ ಎಂದು ಇತಿಹಾಸ ಹೇಳುತ್ತದೆ.

ಅಯೋಧ್ಯೆಯಿಂದ ವಿಗ್ರಹಗಳನ್ನು ಕದಿಯಬೇಕಾಯಿತು: ಇದಾದ ನಂತರ ರಾಜಾ ಜಗತ್ ಸಿಂಗ್ ಅವರು ರಘುನಾಥರ ಪ್ರತಿಮೆಯನ್ನು ತರಲು ಬಾಬಾ ಕಿಶನ್‌ದಾಸ್ ಅವರ ಶಿಷ್ಯ ದಾಮೋದರ್ ದಾಸ್ ಅವರನ್ನು ಅಯೋಧ್ಯೆಗೆ ಕಳುಹಿಸಿದರು. ಬಹಳ ಎಚ್ಚರಿಕೆಯಿಂದ ವಿಗ್ರಹವನ್ನು ಕದ್ದು ಹರಿದ್ವಾರ ತಲುಪಿದಾಗ ಅಲ್ಲಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಆ ಸಮಯದಲ್ಲಿ ಅಯೋಧ್ಯೆಯ ಪಂಡಿತನು ವಿಗ್ರಹವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲಾರಂಭಿಸಿದಾಗ ಅದು ತುಂಬಾ ಭಾರವಾಗಿತ್ತು. ಆದರೆ, ದಾಮೋದರ ದಾಸ್​ ಅದನ್ನು ಎತ್ತಿದಾಗ ವಿಗ್ರಹವು ಹೂವಿನಂತೆ ಹಗುರವಾಯಿತು. ಆಗ ಇಡೀ ಪ್ರಸಂಗವನ್ನು ಭಗವಾನ್ ರಘುನಾಥನ ಲೀಲೆ ಎಂದು ಜನರು ಭಾವಿಸಿದರು. ಅಲ್ಲದೇ, ವಿಗ್ರಹವನ್ನು ಕುಲುಗೆ ತರಲು ಅವಕಾಶ ಮಾಡಿಕೊಟ್ಟರು. ಈ ವಿಗ್ರಹಗಳನ್ನು ನೋಡಿದ ನಂತರ ರಾಜನ ರೋಗವು ಸಹ ದೂರವಾಯಿತು ಎಂದು ಹೇಳಲಾಗುತ್ತದೆ. ನಂತರ, ರಾಜನು ತನ್ನ ಜೀವನ ದೇವರಿಗೆ ಅರ್ಪಿಸಿ ದಸರಾ ಉತ್ಸವ ಪ್ರಾರಂಭಿಸಿದರು ಎಂದು ಇತಿಹಾಸದಿಂದ ತಿಳಿದು ಬಂದಿದೆ.

ದೇವಾನು ದೇವತೆಗಳಿಗೆ ಬಣ್ಣಬಣ್ಣದ ಪಲ್ಲಕ್ಕಿಗಳು:ದಸರಾ ಹಬ್ಬದ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳ ಬಣ್ಣಬಣ್ಣದ ವೇಷಭೂಷಣಗಳು ಕಣ್ಣಿಗೆ ರಾಚುತ್ತವೆ. ಅಲ್ಲದೇ, ಎಲ್ಲ ದೇವತೆಗಳ ವಿಗ್ರಹಗಳನ್ನು ವರ್ಣರಂಜಿತ ಪಲ್ಲಕ್ಕಿಗಳಲ್ಲಿ ಇರಿಸಿ ರಥಯಾತ್ರೆ ನಡೆಸಲಾಗುತ್ತದೆ. ಹಬ್ಬದ ಆರನೇ ದಿನದಂದು ಎಲ್ಲ ದೇವತೆಗಳು ಒಟ್ಟಿಗೆ ಸೇರುತ್ತಾರೆ. ಅದನ್ನು 'ಮೊಹಲ್ಲಾ' ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಆಜಾನ್‌ ಕೇಳಿ ಭಾಷಣ ನಿಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ABOUT THE AUTHOR

...view details