ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದಲ್ಲಿ ಬರೆದ ಟಿಪ್ಪಣಿ (ಪೇಪರ್ ನೋಟ್ಸ್) ಬಳಸಿ ಮಾತನಾಡಿರುವುದು ಗಮನ ಸೆಳೆಯಿತು.
ಸತತ 9ನೇ ಬಾರಿಗೆ ಧ್ವಜಾರೋಹಣ ಮಾಡಿರುವ ಪ್ರಧಾನಿ ಮೋದಿ ನಿರಂತರವಾಗಿ 83 ನಿಮಿಷಗಳ ಕಾಲ ಭಾಷಣ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಧೀರ ನಾಯಕರು, ನಾರಿ ಶಕ್ತಿ, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಸೇರಿದಂತೆ ವಿವಿಧ ವಿಷಯಗಳನ್ನು ತಮ್ಮ ಭಾಷಣದಲ್ಲಿ ಅವರು ಪ್ರಸ್ತಾಪಿಸಿದರು. ಆದರೆ, ಈ ಬಾರಿ ತಮ್ಮ ಭಾಷಣಕ್ಕೆ ಟೆಲಿಪ್ರಾಂಪ್ಟರ್ ಬಳಸಲಿಲ್ಲ. ಇದರ ಬದಲು ಕಾಗದದಲ್ಲಿ ಮಾಡಿಟ್ಟುಕೊಂಡ ಟಿಪ್ಪಣಿಯನ್ನೇ ನೆಚ್ಚಿಕೊಂಡಿದ್ದರು.