ಕರ್ನಾಟಕ

karnataka

ETV Bharat / bharat

ಅಫ್ಘನ್ ಅಧ್ಯಕ್ಷರೊಂದಿಗೆ ಇಂದು ಪ್ರಧಾನಿ ಮೋದಿ ಸಭೆ - Prime Minister Narendra Modi

ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಶಾಹೂತ್ ಅಣೆಕಟ್ಟು ಒಪ್ಪಂದದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

Prime Minister Narendra Modi
ಅಫ್ಘನ್ ಅಧ್ಯಕ್ಷರೊಂದಿಗೆ ಇಂದು ಪ್ರಧಾನಿ ಮೋದಿ ಮಾತುಕತೆ

By

Published : Feb 9, 2021, 10:36 AM IST

ನವದೆಹಲಿ: ಇಂದು ಭಾರತ ಹಾಗೂ ಅಫ್ಘಾನಿಸ್ತಾನ ದೇಶಗಳ ನಡುವೆ ಅಂತಾರಾಷ್ಟ್ರೀಯ ಮಟ್ಟದ ವರ್ಚುವಲ್​ ಸಭೆ ನಡೆಯಲಿದ್ದು, ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಮಾತನಾಡಲಿದ್ದಾರೆ.

ಸಭೆಯಲ್ಲಿ ಶಾಹೂತ್ ಅಣೆಕಟ್ಟು ಒಪ್ಪಂದದ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಶಾಹೂತ್ ಅಣೆಕಟ್ಟು ಕಾಬೂಲ್‌ನ ಎರಡು ದಶಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಿದ್ದು, ನೀರಾವರಿಗಾಗಿ ಸಹ ಬಳಸಲಾಗುವುದು. ಈ ಡ್ಯಾಮ್​ ಅನ್ನು ಕಾಬೂಲ್ ನದಿ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗುವುದು.

ಇದನ್ನೂ ಓದಿ: ಅಮೆರಿಕ​ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಪಿಎಂ ಮೋದಿ ಜೊತೆ ಬೈಡನ್​ ಮಾತುಕತೆ

2020 ರ ನವೆಂಬರ್‌ನಲ್ಲಿ ನಡೆದ ಸಮಾವೇಶದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತವು ಅಫ್ಘಾನಿಸ್ತಾನದ ಕಾಬೂಲ್ ನದಿ ತೀರದಲ್ಲಿ ಶಾಹೂತ್ ಅಣೆಕಟ್ಟು ನಿರ್ಮಿಸಲಿದೆ ಮತ್ತು ಉಭಯ ರಾಷ್ಟ್ರಗಳ ಸರ್ಕಾರಗಳು ಇತ್ತೀಚೆಗೆ ಇದಕ್ಕಾಗಿ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ತಿಳಿಸಿದ್ದರು.

ಅಣೆಕಟ್ಟು ಜೊತೆಯಲ್ಲಿ ಅಫ್ಘಾನಿಸ್ತಾನದಲ್ಲಿ 80 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ 150 ಯೋಜನೆಗಳನ್ನು ಕೂಡ ಭಾರತ ಘೋಷಿಸಿತ್ತು.

ABOUT THE AUTHOR

...view details