ಕರ್ನಾಟಕ

karnataka

ETV Bharat / bharat

ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ.. ಗಣ್ಯರ ಕಂಬನಿ.. ಅಹಮದಾಬಾದ್​​ನತ್ತ ಪ್ರಧಾನಿ - Pm Modi mother Heeraben Modi

ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ - ಗಣ್ಯರಿಂದ ಕಂಬನಿ - ಜೂನ್​ ತಿಂಗಳಲ್ಲಿ ನೂರು ವಸಂತ ಪೂರೈಸಿದ್ದ ಹೀರಾಬೆನ್​

Pm Modi mother Heeraben Modi passes away at age of 100
ಪಿಎಂ ಮೋದಿ ತಾಯಿ ಹೀರಾಬೆನ್ ನಿಧನ

By

Published : Dec 30, 2022, 6:28 AM IST

Updated : Dec 30, 2022, 9:13 AM IST

ಅಹಮದಾಬಾದ್​(ಗುಜರಾತ್​):ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್​ ಮೋದಿ ಅವರು(100) ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಕಾರಣ, ಅವರನ್ನು ಗುಜರಾತ್​ನ ಅಹಮದಾಬಾದ್​ನಲ್ಲಿರುವ​ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ನಿನ್ನೆಯಷ್ಟೇ ವೈದ್ಯರು ಘೋಷಣೆ ಮಾಡಿದ್ದರು.

36 ನಿಮಿಷಗಳ ಹಿಂದೆಯಷ್ಟೇ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ’’ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ .. ನನ್ನ ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳ ಶಕ್ತಿ ಹಾಗೂ ಪ್ರೀತಿ, ವಾತ್ಸಲ್ಯವನ್ನು ಅನುಭವಿಸಿದ್ದೇನೆ, ಅವರದ್ದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ‘‘ ಎಂದು ತಾಯಿಯ ಗುಣಗಾನ ಮಾಡಿದ್ದಾರೆ.

ಅಹಮದಾಬಾದ್​ನತ್ತ ಪ್ರಧಾನಿ ಮೋದಿ:ಪ್ರಧಾನಿ ಮೋದಿ ಅವರು ಅಹಮದಾಬಾದ್‌ಗೆ ತೆರಳಿದ್ದಾರೆ. ಹೌರಾ, ಕೋಲ್ಕತ್ತಾದಲ್ಲಿ ವಂದೇ ಭಾರತ್ ರೈಲಿಗೆ ಫ್ಲ್ಯಾಗ್‌ಆಫ್ ಮತ್ತು ರೈಲ್ವೆಯ ಇತರ ಅಭಿವೃದ್ಧಿ ಕಾಮಗಾರಿಗಳು ಮತ್ತು ನಮಾಮಿ ಗಂಗೆ ಅಡಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಬೇಕಿತ್ತು. ಹಿಂದಿನ ಯೋಜನೆಯಂತೆ ಈ ಕಾರ್ಯಕ್ರಮಗಳು ನಡೆಯಲಿವೆ ಎನ್ನಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಬಹುದು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಕಂಬನಿ ಮಿಡಿದ ಗಣ್ಯರು:ಪ್ರಧಾನಿ ಮೋದಿ ಅವರ ತಾಯಿ ನಿಧನರಾಗಿದ್ದಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹಾಗೂ ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​​ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ, ಗೃಹ ಸಚಿವ ಅಮಿತ್​ ಶಾ, ತಮಿಳುನಾಳು ಸಿಎಂ ಎಂಕೆ ಸ್ಟಾಲಿನ್​ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸೂಚಿಸಿದ ರಾಹುಲ್​ ಗಾಂಧಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬಾ ಅವರು ನಿಧನರಾದ ಸುದ್ದಿ ಕೇಳಿ ದುಃಖವಾಯಿತು. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ಅವರ ಆರೋಗ್ಯ ವಿಚಾರಿಸಿ, ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಮಯ ಕಳೆದಿದ್ದರು ಪ್ರಧಾನಿ ಮೋದಿ. ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೆಹಲಿಯಿಂದ ಅಹಮದಾಬಾದ್​ಗೆ ದಿಢೀರ್​ ಆಗಮಿಸಿ ತಾಯಿಯ ಬಗ್ಗೆ ಕಾಳಜಿ ವಹಿಸಿದ್ದರು. ಸಂಜೆ 4 ಗಂಟೆ ಸುಮಾರಿಗೆ ಅಹಮದಾಬಾದ್​ ತಲುಪಿದ್ದ ಅವರು, ನೇರವಾಗಿ ಮೆಹ್ತಾ ಆಸ್ಪತ್ರೆಗೆ ತೆರಳಿದ್ದರು. ಇಲ್ಲಿ ತಾಯಿಯ ಆರೋಗ್ಯ ವಿಚಾರಿಸಿದ ಪ್ರಧಾನಿ ವೈದ್ಯರೊಂದಿಗೆ ಚರ್ಚೆ ಕೂಡಾ ನಡೆಸಿದ್ದರು.

ಇದನ್ನೂ ಓದಿ: ಪ್ರಧಾನಿ ಕರೆ ಮಾಡಿದ್ದರು, ನಾವು ಚೆನ್ನಾಗಿದ್ದೇವೆ.. ಪ್ರಹ್ಲಾದ್ ದಾಮೋದರ್ ದಾಸ್ ಮೋದಿ

ಪ್ರಧಾನಿ ಆಸ್ಪತ್ರೆಗೆ ಭೇಟಿ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಿಎಂ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ. ಕೈಲಾಸನಾಥನ್, ಶಾಸಕರಾದ ದರ್ಶನಾಬೆನ್ ವಘೇಲಾ ಮತ್ತು ಕೌಶಿಕ್ ಜೈನ್ ಸಹ ಉಪಸ್ಥಿತರಿದ್ದರು. ಪ್ರಧಾನಿ ಆಗಮನದಿಂದಾಗಿ ಎಲ್ಲೆಡೆ ಅಲರ್ಟ್ ಘೋಷಿಸಲಾಗಿತ್ತು. ಅಹಮದಾಬಾದ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ, ಹೆಚ್ಚಿನ ಪೊಲೀಸ್​ ಭದ್ರತೆಯನ್ನೂ ನಿಯೋಜಿಸಲಾಗಿತ್ತು.

ಇದೇ ವೇಳೆ, ಹೀರಾಬೆನ್​ ಆರೋಗ್ಯದ ಬಗ್ಗೆ ಆಸ್ಪತ್ರೆಯವರು ಮಾಧ್ಯಮ ಪ್ರಕಟಣೆ ನೀಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಬುಧವಾರ ಹಠಾತ್​ ಆಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ಮತ್ತೊಂದೆಡೆ, ಪ್ರಧಾನಿ ಮೋದಿ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಹಾಮೃತ್ಯುಂಜಯ ವಿಧಿವಿಧಾನಗಳನ್ನು ಕೂಡಾ ನೆರವೇರಿಸಲಾಯಿತು. ಬನಾರಸ್‌ನ ದೇವಾಲಯದಲ್ಲಿ ಹವನ ಪೂಜೆಯನ್ನು ಮಾಡುವುದರೊಂದಿಗೆ ಹೀರಾಬೆನ್ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿಗಿತ್ತು. ವಾರಾಣಸಿಯ ಅಸ್ಸಿ ಘಾಟ್‌ನಲ್ಲಿರುವ ಪಗೋಡಾದಲ್ಲಿ ಮಹಾಮೃತ್ಯುಂಜಯ ಹೋಮ ನೆರವೇರಿಸಲಾಗಿತ್ತು.

ಜೂನ್​ನಲ್ಲಿ ನೂರು ವಸಂತ ಪೂರೈಸಿದ್ದ ಹೀರಾಬೆನ್: ಹಿರಿಯ ಜೀವವಾಗಿರುವ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್, ಇದೇ ವರ್ಷದ ಜೂನ್​ ತಿಂಗಳಲ್ಲಿ ನೂರು ವಸಂತಗಳನ್ನು ಪೂರೈಸಿದ್ದರು. ಅಂದು ಸಹ ಮೋದಿ ಖುದ್ದು ಅಮ್ಮನನ್ನು ಭೇಟಿ ಮಾಡಿ, ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆದಿದ್ದರು. ಅಲ್ಲದೇ, ಇತ್ತೀಚೆಗಷ್ಟೇ ಮುಗಿದ ಗುಜರಾತ್ ವಿಧಾನಸಭೆ ಚುನಾವಣೆಗೂ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಹೀರಾಬೆನ್​ ಅವರನ್ನು ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೀರಾಬೆನ್​ ಅವರು ಗಾಲಿಕುರ್ಚಿಯ ಮೇಲೆ ಬಂದು ಮತ ಚಲಾಯಿಸಿದ್ದರು.

Last Updated : Dec 30, 2022, 9:13 AM IST

ABOUT THE AUTHOR

...view details