ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳೊಡನೆ ಸಂಪರ್ಕ ಸಾಧಿಸಿ, ಅವುಗಳ ನಡುವೆ ಸಮನ್ವಯದ ಕೊರತೆಯನ್ನು ಪರಿಹರಿಸಲು 'ಪಿಎಂ ಗತಿ ಶಕ್ತಿ(PM GatiShakti) ನ್ಯಾಷನಲ್ ಮಾಸ್ಟರ್ ಪ್ಲಾನ್' ಅನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ್ದಾರೆ.
ಪಿಎಂ ಗತಿ ಶಕ್ತಿ ಯೋಜನೆಯ ಮುಂದಿನ ಪೀಳಿಗೆಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಸಲುವಾಗಿ ಇರುವ ಪ್ರಧಾನಿ ಮೋದಿ ನಿರಂತರ ಪ್ರಯತ್ನದ ಫಲವಾಗಿದೆ. ಈ ಯೋಜನೆ ಸುಲಭ ವ್ಯವಹಾರ ನಡೆಸುವ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಪ್ರಧಾನಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜನರು, ಸರಕು ಮತ್ತು ಸೇವೆಗಳನ್ನು ಒಂದು ಸಾರಿಗೆ ವಿಧಾನದಿಂದ ಮತ್ತೊಂದು ಸಾರಿಗೆ ವಿಧಾನಕ್ಕೆ ಬದಲಾಯಿಸಲು ಗತಿ ಶಕ್ತಿ ಯೋಜನೆಯ ಬಹುಮಾದರಿ ವಿಧಾನ ಸಹಕರಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.