ಕರ್ನಾಟಕ

karnataka

ETV Bharat / bharat

ನೂತನ ಐಪಿಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ: ದೇಶಕಟ್ಟಲು Modi ಕಿವಿಮಾತು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೈದರಾಬಾದ್ ಮೂಲದ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರೊಬೇಷನರ್‌ಗಳೊಂದಿಗೆ ಸಂವಾದ ನಡೆಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಐಪಿಎಸ್​ ಅಧಿಕಾರಿಗಳಾದ ಪಾತ್ರ ಕುರಿತು ವಿವರಣೆ ನೀಡಿದ್ದು, ದೇಶದ ಅಭಿವೃದ್ಧಿ ಕಾರ್ಯಕ್ಕೆ ಕರೆ ನೀಡಿದ್ದಾರೆ.

pm-modi-interacts-with-ips-probationers-tells-them-next-25-years-crucial-for-indias-development
ನೂತನ ಐಪಿಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ

By

Published : Jul 31, 2021, 3:21 PM IST

ನವದೆಹಲಿ: ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಹೊಸದಾಗಿ ಆಯ್ಕೆಯಾಗಿರುವ ಐಪಿಎಸ್ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ, ಮುಂದಿನ 25 ವರ್ಷದ ಅವರ ವೃತ್ತಿ ಜೀವನವೂ ಭಾರತದ ಅಭಿವೃದ್ಧಿಗೆ ಮುಖ್ಯವಾಗಿರಲಿದ್ದು, 'ರಾಷ್ಟ್ರ ಮೊದಲು, ಯಾವಾಗಲೂ ಮೊದಲು' ಎಂಬ ಮನೋಭಾವವು ನಿಮ್ಮ ಕೆಲಸದಲ್ಲಿ ಪ್ರತಿಫಲಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಭಾರತ ಪ್ರತಿ ಹಂತ ಮತ್ತು ಪ್ರತೀ ವಲಯದಲ್ಲಿ ಬದಲಾವಣೆಯಾಗುತ್ತಿರುವ ಸಮಯದಲ್ಲೇ ನಿಮ್ಮ ವೃತ್ತಿ ಜೀವನ ಆರಂಭಗೊಳ್ಳುತ್ತಿದೆ. ನಿಮ್ಮ ಮುಂದಿನ 25 ವರ್ಷದ ಜೀವನ ಭಾರತದ ಅಭಿವೃದ್ಧಿಯಲ್ಲೂ ಬಹುಮುಖ್ಯ ಅಂಗವಾಗಿರಲಿದೆ. ಹೀಗಾಗಿ ನಿಮ್ಮ ತಯಾರಿಯೂ ಈ ಗುರಿಯುತ್ತ ಇರಲಿ. ಈ ಆಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ ದಿನಾಚರಣೆ ನಡೆಯಲಿದೆ. ಕಳೆದ 75 ವರ್ಷದಲ್ಲಿ ಭಾರತ ಉತ್ತಮ ಪೊಲೀಸ್ ಇಲಾಖೆಯ ಸ್ಥಾಪನೆಗೆ ಶ್ರಮಿಸಲಾಗಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪೊಲೀಸ್ ತರಬೇತಿಯ ಪ್ರಕ್ರಿಯೆಯಲ್ಲೂ ಬಹಳಷ್ಟು ಬದಲಾವಣೆಯಾಗಿದೆ ಎಂದಿದ್ದಾರೆ.

ನೀವು ಏಕ ಭಾರತ, ಶ್ರೇಷ್ಠ ಭಾರತ ಎಂಬ ಧ್ಯೇಯದ ಪ್ರತಿರೂಪವಾಗಬೇಕಿದೆ, ದೇಶದ ಯಾವುದೇ ಜಿಲ್ಲೆಯಲ್ಲಿ ಕರ್ತವ್ಯ ಮಾಡುವಾಗಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಭಾವನೆ ಇರಲಿ ಎಂದಿದ್ದಾರೆ.

ಇದನ್ನೂ ಓದಿ:GST ಹಣ ಕಟ್ಟಬೇಡಿ: ನರೇಂದ್ರ ಮೋದಿ ಸಹೋದರನಿಂದ ವ್ಯಾಪಾರಿಗಳಿಗೆ ಮನವಿ

ABOUT THE AUTHOR

...view details