ಕರ್ನಾಟಕ

karnataka

ETV Bharat / bharat

ವ್ಯಾಕ್ಸಿನ್​, ಆಕ್ಸಿಜನ್​ ಜೊತೆ ಪ್ರಧಾನಿ ಮೋದಿಯೂ ಗಾಯಬ್​: ರಾಗಾ ಟೀಕೆ

ಲಸಿಕೆಗಳು, ಆಮ್ಲಜನಕ ಮತ್ತು ಔಷಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯೂ ಗಾಯಬ್ ಆಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

ರಾಹುಲ್ ಗಾಂಧಿ

By

Published : May 13, 2021, 11:55 AM IST

ನವದೆಹಲಿ:ಕೊರೊನಾ ಸಾಂಕ್ರಾಮಿಕದಿಂದಾದಿ ದೇಶವು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದು, ಲಸಿಕೆಗಳು, ಆಮ್ಲಜನಕ ಮತ್ತು ಔಷಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯೂ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

"ಸೆಂಟ್ರಲ್​ ವಿಸ್ಟಾ ಯೋಜನೆ, ಔಷಧಿಗಳ ಮೇಲಿನ ಜಿಎಸ್​ಟಿ, ಅಲ್ಲಿ ಇಲ್ಲಿ ಮತ್ತು ಪ್ರಧಾನಮಂತ್ರಿಯ ಫೋಟೋಗಳು ಮಾತ್ರ ಉಳಿದುಕೊಂಡಿವೆ. ಅದನ್ನು ಬಿಟ್ಟರೆ ವ್ಯಾಕ್ಸಿನ್​, ಆಕ್ಸಿಜನ್, ಔಷಧಿಗಳ ​ಜೊತೆ ಪ್ರಧಾನಿ ಮೋದಿಯೂ ಗಾಯಬ್ ಆಗಿದ್ದಾರೆ" ಎಂದು ರಾಗಾ ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನಿನ್ನೆ ದೇಶದಲ್ಲಿ ಕೋವಿಡ್ ಸುನಾಮಿಗೆ 4,120 ಮಂದಿ ಬಲಿ: 3.62 ಲಕ್ಷ ಸೋಂಕಿತರು ಪತ್ತೆ

ದೇಶದಲ್ಲಿ ಕೋವಿಡ್​ ಎರಡನೇ ಅಲೆ ದಿನೇ ದಿನೆ ಉಲ್ಬಣಗೊಳ್ಳುತ್ತಿದ್ದು, ಸಾವು-ನೋವುಗಳ ಮಧ್ಯೆ ದೇಶಾದ್ಯಂತ ಲಸಿಕೆ, ಹಾಸಿಗೆ, ಆಮ್ಲಜನಕದ ಅಭಾವ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,62,727 ಕೋವಿಡ್​ ಕೇಸ್​ಗಳು ಹಾಗೂ 4,120 ಸಾವು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details