ಕರ್ನಾಟಕ

karnataka

ETV Bharat / bharat

ಇಂದು ಕ್ರೈಸ್ತರ ಈಸ್ಟರ್​ ಹಬ್ಬ: ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಇಂದು ಜಗತ್ತಿನೆಲ್ಲೆಡೆ ಕ್ರೈಸ್ತ ಧರ್ಮೀಯರು ಈಸ್ಟರ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ಶುಭ ಸಂದರ್ಭಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿ ಹಲವು ಗಣ್ಯರು ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

By

Published : Apr 4, 2021, 9:51 AM IST

ಹೈದರಾಬಾದ್​: ಇಂದು ಜಗತ್ತಿನಾದ್ಯಂತ ನೆಲೆಸಿರುವ ಕ್ರೈಸ್ತ ಧರ್ಮೀಯರು ಈಸ್ಟರ್​ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್​ ಹಬ್ಬದ ಶುಭಾಶಯ ತಿಳಿಸಿ ಟ್ವೀಟ್​ ಮಾಡಿದ್ದಾರೆ.

"ಈಸ್ಟರ್ ಹಬ್ಬದ ಶುಭಾಶಯಗಳು. ಈ ದಿನ, ನಾವು ಯೇಸುಕ್ರಿಸ್ತನ ಧಾರ್ಮಿಕ ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ಸಾಮಾಜಿಕ ಸಬಲೀಕರಣಕ್ಕೆ ಅವರು ನೀಡಿದ ಆದ್ಯತೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ" ಎಂದು ಬರೆದಿದ್ದಾರೆ.

ಇನ್ನು ಇದೇ ವೇಳೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಸಹ ಟ್ವೀಟ್​ ಮಾಡಿ ಶುಭಕೋರಿದ್ದಾರೆ. "ಪ್ರಪಂಚದಾದ್ಯಂತ ಆಚರಿಸಲ್ಪಡುವ ಯೇಸುಕ್ರಿಸ್ತನ ಪುನರುತ್ಥಾನವು ನಮಗೆ ಭರವಸೆ ಮತ್ತು ಸಂತೋಷವನ್ನು ನೀಡುತ್ತದೆ. ಈ ಹಬ್ಬ ಮಾನವೀಯತೆ, ಒಳ್ಳೆಯತನದ ಬಗ್ಗೆ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ಯೇಸುಕ್ರಿಸ್ತನ ಬೋಧನೆಗಳು ನಮ್ಮ ಸಮಾಜದಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯದ ಬಂಧಗಳನ್ನು ಬಲಪಡಿಸಲಿ" ಎಂದಿದ್ದಾರೆ.

ಹಬ್ಬದ ಬಗ್ಗೆ ಒಂದಿಷ್ಟು ಮಾಹಿತಿ...

ಈಸ್ಟರ್ ಹಬ್ಬವು ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್​ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಗುಡ್​ ಫ್ರೈಡೆ ಬಳಿಕ ಬರುವ ಮೊದಲ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ಹಬ್ಬ ಆಚರಿಸಲಾಗುತ್ತದೆ.

ABOUT THE AUTHOR

...view details