ವಾರಾಣಸಿ (ಉತ್ತರ ಪ್ರದೇಶ): ವಿಡಿಯೋ ಸರ್ವೇ ವೇಳೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗವನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ, ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವು ಬುಧವಾರ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದೆ. ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು ಈ ಅರ್ಜಿಯನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದ್ದಾರೆ ಎಂದು ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಹೇಳಿದ್ದಾರೆ.
ಶಿವಲಿಂಗ ಪೂಜೆಗೆ ಅವಕಾಶ ಕೋರಿ ಅರ್ಜಿ: ತ್ವರಿತ ನ್ಯಾಯಾಲಯಕ್ಕೆ ಅರ್ಜಿ ವರ್ಗಾವಣೆ - Plea for nod to prayers at Shivling in Gyanvapi complex transferred to fast track court
ವಿಡಿಯೋ ಸರ್ವೇ ವೇಳೆ ಜ್ಞಾನವಾಪಿ ಆವರಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾದ "ಶಿವಲಿಂಗ" ವನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು, ಜಿಲ್ಲಾ ನ್ಯಾಯಾಲಯವು ತ್ವರಿತ ನ್ಯಾಯಾಲಯಕ್ಕೆ ಬುಧವಾರ ವರ್ಗಾಯಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ತ್ವರಿತ ನ್ಯಾಯಾಲಯವು ಮೇ. 30ರಂದು ನಡೆಸಲಿದೆ. ವಿಶ್ವ ವೇದಿಕ್ ಸನಾತನ ಸಂಘದ ಪರವಾಗಿ ಮನವಿ ಸಲ್ಲಿಸಲಾಗಿದೆ. ಸಂಘದ ಅಧ್ಯಕ್ಷ ಜಿತೇಂದ್ರ ಸಿಂಗ್ ಬಿಸೆನ್ ಅವರ ಪತ್ನಿ ಕಿರಣ್ ಸಿಂಗ್, ಅದರ ಪ್ರಧಾನ ಕಾರ್ಯದರ್ಶಿ ಮಂಗಳವಾರ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೇ, ಶಿವಲಿಂಗ ಪತ್ತೆಯಾದ ಮಸೀದಿ ಆವರಣದೊಳಕ್ಕೆ ಮುಸ್ಲಿಮರ ಪ್ರವೇಶ ನಿರ್ಬಂಧಿಸಬೇಕು. ಈ ಆವರಣವನ್ನು ತಮಗೆ ಬಿಟ್ಟುಕೊಟ್ಟು, ಶಿವಲಿಂಗಕ್ಕೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ:ಆಂಧ್ರ ಹಿಂಸಾಚಾರಕ್ಕೆ ಸಂಬಂಧಿಸಿ 46 ಜನರ ಬಂಧನ : ಜಗನ್ ಸರ್ಕಾರದ ವಿರುದ್ಧ ನಾಯ್ಡು, ಪವನ್ ಕಲ್ಯಾಣ್ ವಾಗ್ದಾಳಿ