ಕರ್ನಾಟಕ

karnataka

ETV Bharat / bharat

ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಡುವ ಸಾಧ್ಯತೆ

ಕ್ಲಿನಿಕಲ್ ಕೋವಿಡ್ -19 ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

plasma
plasma

By

Published : May 16, 2021, 3:44 PM IST

ನವದೆಹಲಿ:ಕೋವಿಡ್ -19 ಗಾಗಿ ಐಸಿಎಂಆರ್-ರಾಷ್ಟ್ರೀಯ ಕಾರ್ಯಪಡೆಯ ಸಭೆಯ ನಂತರ, ಪ್ಲಾಸ್ಮಾ ಚಿಕಿತ್ಸೆಯನ್ನು ಕ್ಲಿನಿಕಲ್ ಕೋವಿಡ್ -19 ನಿರ್ವಹಣಾ ಪ್ರೋಟೋಕಾಲ್‌ಗಳಿಂದ ಕೈಬಿಡುವ ಸಾಧ್ಯತೆಯಿದೆ.

ಕ್ಲಿನಿಕಲ್ ಕೋವಿಡ್ -19 ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಕೋವಿಡ್​ ಕುರಿತಾದ ವೈದ್ಯಕೀಯ ಸಂಶೋಧನಾ ಮಂಡಳಿಯ ಕಾರ್ಯಪಡೆಯ ಸಭೆಯಲ್ಲಿ ಬಹುತೇಕ ಸದಸ್ಯರು ಪ್ಲಾಸ್ಮಾ ಥೆರಪಿ ಬೇಡ ಎಂದಿದ್ದಾರೆ ಎನ್ನಲಾಗ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಕುರಿತು ಸಲಹೆ ನೀಡುವ ನಿರೀಕ್ಷೆಯಿದೆ. ದೇಶದಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿರುವಾಗ, ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮಕಾರಿತ್ವದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details