ನವದೆಹಲಿ: ವಿಮಾನ ನಿರ್ಗಮನ ವಿಳಂಬವಾಗುವ ಬಗ್ಗೆ ಅನೌನ್ಸ್ ಮಾಡುತ್ತಿದ್ದ ಇಂಡಿಗೋ ಏರ್ಲೈನ್ಸ್ಪೈಲಟ್ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕನನ್ನು 28 ವರ್ಷದ ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದ್ದು, ಆತನಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 41ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಾಹಿಲ್ ಕಟಾರಿಯಾ ದಕ್ಷಿಣ ದೆಹಲಿಯ ಅಮರ್ ಕಾಲೊನಿಯ ನಿವಾಸಿಯಾಗಿದ್ದು, ಸ್ಟೇಷನರಿ ಹಾಗೂ ಆಟಿಕೆ ಅಂಗಡಿ ನಡೆಸುತ್ತಿದ್ದಾರೆ. ಭಾನುವಾರ ಘಟನೆ ನಡೆದ ವೇಳೆ ಸಾಹಿಲ್ ಕಟಾರಿಯಾ ತಮ್ಮ ಪತ್ನಿಯೊಂದಿಗೆ ಹನಿಮೂನ್ಗೆ ಗೋವಾಕ್ಕೆ ತೆರಳುತ್ತಿದ್ದರು. ವಿಮಾನ ನಿರ್ಗಮನ 13 ಗಂಟೆಗಳ ಕಾಲದ ವಿಳಂಬದಿಂದಾಗಿ ಹತಾಶೆಗೊಂಡಿದ್ದ ಅವರು, ವಿಮಾನದ ಒಳಗಿದ್ದ ಪೈಲಟ್ಗೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಪೈಲಟ್ ಅನುಪ್ ಕುಮಾರ್ ಕಟಾರಿಯಾ ವಿರುದ್ಧ ದೂರು ದಾಖಲಿಸಿದ್ದು, ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.