ಕರ್ನಾಟಕ

karnataka

ETV Bharat / bharat

ಅಸ್ಸೋಂನ ಹಂದಿಗಳಲ್ಲಿ ಆಫ್ರಿಕನ್​ ಜ್ವರ ಪತ್ತೆ; ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಮತ್ತೆ 4 ಸಾವು - ಹಂದಿಗಳಿಗೆ ಆಫ್ರಿಕನ್​ ಜ್ವರ

ಈಶಾನ್ಯ ರಾಜ್ಯಗಳಾದ ಅಸ್ಸೋಂ, ಮಿಜೋರಾಂ, ಮೇಘಾಲಯದಲ್ಲಿ ಹಂದಿಗಳಿಗೆ ಆಫ್ರಿಕನ್​ ಜ್ವರ ಕಂಡು ಬರುತ್ತಿದೆ. ದಿಬ್ರುಗಢದ ಫಾರ್ಮ್​ನಲ್ಲಿ ಕೂಡ ಹಂದಿಗಳಿಗೆ ಸೋಂಕು ಪತ್ತೆಯಾಗಿದೆ. ಇನ್ನೊಂದೆಡೆ, ಜಪಾನೀಸ್ ಎನ್ಸೆಫಾಲಿಟಿಸ್‌ ಖಾಯಿಲೆಗೆ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 27ಕ್ಕೇರಿದೆ.

ಅಸ್ಸೋಂನ ಫಾರ್ಮ್​ನಲ್ಲಿ ಹಂದಿಗಳಿಗೆ ಆಫ್ರಿಕನ್​ ಜ್ವರ ಪತ್ತೆ
ಅಸ್ಸೋಂನ ಫಾರ್ಮ್​ನಲ್ಲಿ ಹಂದಿಗಳಿಗೆ ಆಫ್ರಿಕನ್​ ಜ್ವರ ಪತ್ತೆ

By

Published : Jul 17, 2022, 7:04 AM IST

Updated : Jul 17, 2022, 7:11 AM IST

ಅಸ್ಸೋಂ:ಇಲ್ಲಿನ ದಿಬ್ರುಗಢದ ಭೋಗಾಲಿ ಪಥರ್ ಗ್ರಾಮದಲ್ಲಿ ನಡೆಸಲಾಗುತ್ತಿರುವ ಫಾರ್ಮ್​ನಲ್ಲಿ ಹಂದಿಗಳಿಗೆ ಆಫ್ರಿಕನ್​ ಜ್ವರ ಕಾಣಿಸಿಕೊಂಡಿದ್ದು, ಎಲ್ಲ ಹಂದಿಗಳನ್ನು ಹರಣ ಮಾಡಿ ಹೂತು ಹಾಕಲಾಗಿದೆ. ಅಲ್ಲದೇ, ಸೋಂಕು ಕಾಣಿಸಿಕೊಂಡ 1 ಕಿಮೀವರೆಗೂ ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದೆ.

ರೈತರೊಬ್ಬರು ನಡೆಸುತ್ತಿರುವ ಫಾರ್ಮ್​ನಲ್ಲಿ ಹಂದಿ ಅಸ್ವಸ್ಥವಾಗಿದ್ದು, ಪರೀಕ್ಷೆಯ ವೇಳೆ ಆಫ್ರಿಕನ್​ ಜ್ವರ ಬಂದಿರುವುದು ಗೊತ್ತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಂದಿಯನ್ನು ಕೊಂದು ಹೂಳಲಾಗಿದೆ. ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಒಂದು ಕಿಮೀ ವ್ಯಾಪ್ತಿಯಲ್ಲಿ ಸೋಂಕಿತ ಪ್ರದೇಶವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಶು ಸಂಗೋಪನೆ ಮತ್ತು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್​, ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಹಂದಿಗಳಿಂದ ಆಫ್ರಿಕನ್​ ಜ್ವರ ಬಂದಿರಬಹುದು ಎಂದು ಹೇಳಲಾಗಿದೆ. ಇದು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರದು, ಅಲ್ಲದೇ ಹಂದಿಗಳಿಂದ ಮನುಷ್ಯರಿಗೆ ಜ್ವರ ಹರಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಮತ್ತೆ 4 ಸಾವು: ರಾಜ್ಯದಲ್ಲಿ ಈ ರೋಗಕ್ಕೆ ಮತ್ತೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 27ಕ್ಕೇರಿದೆ ಎಂದು ಅಸ್ಸೋಂ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಜಪಾನೀಸ್ ಎನ್ಸೆಫಾಲಿಟಿಸ್‌ ಎಂಬುದು ಮೆದುಳು ಸಂಬಂಧಿ ವೈರಸ್ ಸೋಂಕು ಆಗಿದ್ದು ಈ ಖಾಯಿಲೆಯು ಮನುಷ್ಯನಿಗೆ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ರೋಗವು ಆಗ್ನೇಯ ಏಷ್ಯಾ ದೇಶಗಳು, ಫೆಸಿಫಿಕ್ ದ್ವೀಪಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಚ್ಚಾಗಿ ಇದು ಹಂದಿಗಳು ಮತ್ತು ಹಕ್ಕಿಗಳನ್ನು ಕಂಡುಬರುತ್ತಿದ್ದು, ಸೊಳ್ಳೆಗಳು ಅವುಗಳಿಗೆ ಕಚ್ಚುವುದರಿಂದ ರೋಗ ಜನರಿಗೂ ಹರಡುತ್ತದೆ.

ಇದನ್ನೂ ಓದಿ:ಸೆಲ್ಫಿ ತೆಗೆದುಕೊಳ್ಳುವಾಗ ಹೆಚ್ಚಿದ ನೀರು, ನಡುನೀರಲ್ಲಿ ಸಿಲುಕಿದ ವಿದ್ಯಾರ್ಥಿಗಳು ... ವಿಡಿಯೋ

Last Updated : Jul 17, 2022, 7:11 AM IST

ABOUT THE AUTHOR

...view details