ಅಮೃತಸರ:ಪಂಜಾಬ್ನಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಗಾಯಕ ಸಿಧು ಮೂಸೆ ವಾಲಾರನ್ನು ಹತ್ಯೆ ಮಾಡಿದ ಬಳಿಕ ನಿನ್ನೆ ಪೆಟ್ರೋಲ್ ಬಂಕ್ ಮಾಲೀಕನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಅಮೃತಸರದ ಗುರು ಕಿ ನಗರಿಯ ಹೋಲಿ ಸಿಟಿ ನಿವಾಸಿ ಮನಮೋಹನ್ ಸಿಂಗ್ ಕೊಲೆಯಾದ ವ್ಯಕ್ತಿ. ಮನಮೋಹನ್ ಸಿಂಗ್ ಪೆಟ್ರೋಲ್ ಪಂಪ್ನಿಂದ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೊರಡುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿದ ಮೂವರು ಆರೋಪಿಗಳು ಏಕಾಏಕಿ ದಾಳಿ ಮಾಡಿದ್ದಾರೆ.
ಈ ವೇಳೆ, ತಪ್ಪಿಸಿಕೊಳ್ಳಲು ಯತ್ನಿಸಿದ ಸಿಂಗ್ ಮೇಲೆ ಆರೋಪಿಗಳು ಬಿಡದೇ ಗುಂಡು ಹಾರಿಸಿದ್ದಾರೆ. ಇದರಿಂದ ಪೆಟ್ರೋಲ್ ಪಂಪ್ ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಂತಕರು ಹಣವನ್ನು ಮುಟ್ಟದೇ ಕೊಲೆ ಮಾಡಿ ಕಾಲ್ಕಿತ್ತಿದ್ದಾರೆ. ಇದರಿಂದ ಇದು ವೈಷಮ್ಯದ ಹಿನ್ನೆಲೆ ನಡೆದ ಹತ್ಯೆ ಎಂದು ಅನುಮಾನಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಪ್ರದೇಶದಲ್ಲಿ ಖ್ಯಾತ ರಾಜಕಾರಣಿ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಅವರು ವಾಸವಾಗಿದ್ದಾರೆ.
ಓದಿ:ಸೇನಾ ಶಿಬಿರದ ಮೇಲೆ ದಾಳಿ: ಇಬ್ಬರು ಉಗ್ರರು ಖತಂ, ಮೂವರು ಯೋಧರು ಹುತಾತ್ಮ