ನವದೆಹಲಿ: ದೇಶದ ಶೇ 40ಕ್ಕಿಂತ ಹೆಚ್ಚಿನ ಸಂಪತ್ತಿನ ಭಾಗವನ್ನು ಶೇ 1ರಷ್ಟು ಶ್ರೀಮಂತರು ಹೊಂದಿದ್ದಾರೆ. ಭಾರತದ ಶೇ 3ರಷ್ಟು ಸಂಪತ್ತನ್ನು ಭಾರತದ ಒಟ್ಟಾರೆ ಜನಸಂಖ್ಯೆಯ ಜನ ಹೊಂದಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಅಸಮಾನತೆಯ ವರದಿ ಬಿಡುಗಡೆ ಮಾಡಲಾಗಿದೆ. ಆಕ್ಸ್ಫರ್ಡ್ ಇಂಟರ್ನ್ಯಾಷನಲ್ ಹೇಳುವಂತೆ, ಭಾರತದ ಹತ್ತು ಶ್ರೀಮಂತರಿಗೆ ಶೇ5 ರಷ್ಟು ತೆರಿಗೆ ವಿಧಿಸುವ ಹಣದಿಂದ ಅರ್ಧದಲ್ಲೇ ಶಾಲೆ ತೊರೆದ ಮಕ್ಕಳನ್ನು ಮತ್ತೆ ಮರಳಿ ತರಲು ಸಂಪೂರ್ಣ ಹಣವನ್ನು ಪಡೆಯಬಹುದು ಎಂದು ತಿಳಿಸಿದೆ. ಈ ವರದಿಯ ಸಾರಾಂಶ ಇಲ್ಲಿದೆ.
2017- 2021ರಿಂದ ಬಿಲಿಯನೇರ್ಗಳಿಗೆ ವಿಧಿಸುವ ಅವಾಸ್ತವಿಕ ತೆರಿಗೆಯಿಂದ ಗೌತಮ್ ಅದಾನಿ ಸಂಪತ್ತು 1.79 ಲಕ್ಷ ಕೋಟಿ ರೂ ಏರಿಕೆ ಕಂಡಿದ್ದು, ಇದು ಭಾರತದ ಪ್ರಾಥಮಿಕ ಶಾಲೆಯ ಐದು ಮಿಲಿಯನ್ ಶಿಕ್ಷಕರ ವೇತನಕ್ಕೆ ಸಮವಾಗಿದೆ. ಶ್ರೀಮಂತರ ಉಳಿಯುವಿಕೆಯ ವರದಿ ಅನುಸಾರ ಭಾರತದ ಬಿಲಿಯನೇರ್ಗಳ ಒಟ್ಟಾರೆ ಸಂಪತ್ತಿನ ಮೇಲೆ ಶೇ 2 ರಷ್ಟು ತೆರಿಗೆ ವಿಧಿಸಿದರೂ ಅದು ಮೂರು ವರ್ಷಕ್ಕೆ ದೇಶಕ್ಕೆ ಬೇಕಾಗುವ ಅಪೌಷ್ಟಿಕತೆ ವೆಚ್ಚವಾದ 40,423 ಕೋಟಿ ರೂ ನೀಡಬಲ್ಲದು. ದೇಶದ 10 ಶ್ರೀಮಂತರಿಗೆ ಶೇ 5ರಷ್ಟು ತೆರಿಗೆ ವಿಧಿಸಿದರೆ ಅದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (86,200 ಕೋಟಿ) ಹಾಗೂ ಆಯುಷ್ ಸಚಿವಾಲಯದ (3,050 ಕೋಟಿ) ಅಂದಾಜಿಗಿಂತ 1.5ಕ್ಕಿಂತ ಹೆಚ್ಚಿನ ಹಣವಾಗಿರಲಿದೆ. ಲಿಂಗ ಅಸಮಾನತೆ ವರದಿ ಅನುಸಾರ ಪುರುಷರು ಒಂದು ರೂಪಾಯಿ ಸಂಪಾದನೆ ಮಾಡಿದರೆ, ಮಹಿಳೆಯರು 63 ಪೈಸೆ ಸಂಪಾದಿಸುತ್ತದೆ, ಪರಿಶಿಷ್ಟ ಜಾತಿ ಮತ್ತು ಗ್ರಾಮೀಣ ಕೆಲಸಗಾರರ ಸಂಪಾದನೆ ಇನ್ನೂ ಸಾಕಷ್ಟು ವ್ಯತ್ಯಾಸವನ್ನು ಹೊಂದಿದೆ.
ಭಾರತದ ಟಾಪ್ 100 ಬಿಲಿಯನೇರ್ಗಳಿಗೆ 2.5 ರಷ್ಟು ಅಥವಾ ಭಾರತದ 10 ಬಿಲಿಯನೇರ್ಗಳಿಗೆ ಶೇ 5ರಷ್ಟು ತೆರಿಗೆ ವಿಧಿಸಿದರೆ, ಇದರಿಂದ ಬಂದ ಹಣದಿಂದ ಶಾಲೆಯನ್ನು ಅರ್ಧಕ್ಕೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಬಹುದಾಗಿದೆ. ಭಾರತದಲ್ಲಿನ ಅಸಮಾನತೆಯ ಪರಿಣಾಮವನ್ನು ಅನ್ವೇಷಿಸಲು ಗುಣಾತ್ಮಕ ಮತ್ತು ಪರಿಣಾಮಾತ್ಮಕ ಮಾಹಿತಿಯ ಮಿಶ್ರಣವಾಗಿದೆ. ದೇಶದ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್ ಸಂಪತ್ತನ್ನು ನೋಡಲು ಫೋರ್ಬ್ಸ್ ಮತ್ತು ಕ್ರೆಡಿಟ್ ಸೂಸ್ಸೆಯಂತಹ ದ್ವಿತೀಯಕ ಮೂಲಗಳನ್ನು ಬಳಸಲಾಗಿದೆ. ಎನ್ಎಸ್ಎಸ್, ಯೂನಿಯನ್ ಬಜೆಟ್ ದಾಖಲೆಗಳು, ಸಂಸದೀಯ ಪ್ರಶ್ನೆಗಳು ಇತ್ಯಾದಿ ಸರ್ಕಾರಿ ಮೂಲಗಳನ್ನು ವರದಿಯನ್ನು ದೃಢೀಕರಿಸಲು ಬಳಸಲಾಗಿದೆ.