ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಏಕಾಏಕಿ ಲಾಕ್​ಡೌನ್​ ಘೋಷಣೆ: ಮದ್ಯಕೊಳ್ಳಲು ಸಾಲುಗಟ್ಟಿ ನಿಂತ ಜನ - ದೆಹಲಿಯ ಖಾನ್​ ಮರುಕಟ್ಟೆ, ಗೋಲ್ ಮಾರುಕಟ್ಟೆ

ಇಂದು ರಾತ್ರಿಯಿಂದ ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್​ಡೌನ್​ ವಿಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಆದೇಶ ಹೊರಡಿಸಿದ ಬೆನ್ನಲ್ಲೇ ಜನರು ಮದ್ಯದಂಗಡಿಗಳ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ.

liquor shop
ಮದ್ಯಕೊಳ್ಳಲು ಸಾಲುಗಟ್ಟಿ ನಿಂತ ಜನ

By

Published : Apr 19, 2021, 2:05 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಏಕಾಏಕಿ ಲಾಕ್​ಡೌನ್​ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ಜನರು ಓಡಿಬಂದು ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ಕೈಯ್ಯಲ್ಲಿ ಮೂರ್ನಾಲ್ಕು ಬಾಟಲಿ ಹಿಡಿದು ಬರುತ್ತಿರುವ ಜನ

ದೆಹಲಿಯ ಖಾನ್​ ಮರುಕಟ್ಟೆ, ಗೋಲ್ ಮಾರುಕಟ್ಟೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿನ ವೈನ್​ ಶಾಪ್​ಗಳ ಮುಂದೆ ಅಪಾರ ಪ್ರಮಾಣದಲ್ಲಿ ಜನರು ನಿಂತಿದ್ದು, ಸಾಮಾಜಿಕ ಅಂತರ, ಮಾಸ್ಕ್​ ಸೇರಿದಂತೆ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.

ಗೋಲ್ ಮಾರುಕಟ್ಟೆಯ ವೈನ್​ ಶಾಪ್​ ಬಳಿಯ ಚಿತ್ರ

ತರಕಾರಿ, ದಿನಸಿ, ಔಷಧಿಯಂತಹ ಅಗತ್ಯ ವಸ್ತುಗಳ ಬಗ್ಗೆ ಚಿಂತೆ ಬಿಟ್ಟು ಮದ್ಯವೇ ಸರ್ವಸ್ವ ಎಂದು ಜನಸಾಮಾನ್ಯರು ಕ್ಯೂನಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಇಂದು ರಾತ್ರಿಯಿಂದ ಒಂದು ವಾರ ದೆಹಲಿಯಲ್ಲಿ 'ಲಾಕ್​ಡೌನ್'​: ಸಿಎಂ ಕೇಜ್ರಿವಾಲ್

ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್​ ಕೇಸ್​ಗಳನ್ನು ಗಮನದಲ್ಲಿಟ್ಟುಕೊಂಡು ಇಂದು ರಾತ್ರಿಯಿಂದ ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್​ಡೌನ್​ ವಿಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಅಂತರ ಮರೆತು ನಿಂತಿರುವ ಜನ

ಅಗತ್ಯ ಹಾಗೂ ತುರ್ತು ಸೇವೆಗಳು ಮುಂದುವರೆಯಲಿವೆ. ಲಾಕ್‌ಡೌನ್ ಅವಧಿಯಲ್ಲಿ ಕೊರತೆಯಿರುವ ಹಾಸಿಗೆಗಳ, ಆಮ್ಲಜನಕ, ಔಷಧಿ ವ್ಯವಸ್ಥೆ ಮಾಡಲಾಗುವುದೆಂದು ಸಿಎಂ ತಿಳಿಸಿದ್ದಾರೆ.

ABOUT THE AUTHOR

...view details