ಖುಷಿನಗರ (ಉತ್ತರ ಪ್ರದೇಶ): ಮನೆಯಲ್ಲಿ ಯಾರೋ ಒಬ್ಬರು ದೃಷ್ಟಿದೋಷದಿಂದ ಬಳಲುತ್ತಿದ್ದರೆ ಇಡೀ ಕುಟುಂಬ ಚಿಂತೆಗೀಡಾಗುತ್ತದೆ. ಆದರೆ, ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಸುಕ್ರೌಳಿ ಗ್ರಾಮದಲ್ಲಿ 100 ಕುಟುಂಬಗಳ ಪೈಕಿ ಅಂದಾಜು 50 ಮಂದಿ ಇರುಳು ಕುರುಡುತನದಿಂದ ಬಳಲುತ್ತಿದ್ದಾರೆ. ಎಲ್ಲರೂ ಸಹ ಕಡು ಬಡವರೇ ಆಗಿದ್ದು, ಮಾಡುವ ಕೆಲಸ ಬಿಟ್ಟು ಕತ್ತಲೆಯಾಗುವ ಮೊದಲು ಮನೆಗೆ ಬಂದು ಸೇರುವಂತೆ ಆಗಿದೆ. ಇದು ಬಡ ಕುಟುಂಬ ಜೀವನಕ್ಕೆ ಶಾಪವಾಗಿ ಪರಿಣಮಿಸಿದೆ.
ಈ ಗ್ರಾಮದ ಒಂದೇ ಮನೆಯಲ್ಲಿ ಇಬ್ಬರು, ಇಲ್ಲವೇ ಒಬ್ಬರು ದೃಷ್ಟಿ ದೋಷದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ಹಲವರಿಗೆ ಈ ಕಾಯಿಲೆ ಹರೆಯದ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದ್ದು, ಇಡೀ ಕುಟುಂಬಗಳನ್ನೇ ಸಂಕಷ್ಟಕ್ಕೆ ದೂಡುತ್ತಿದೆ. ಕೆಲವರು ಇದೇ ಕಾಯಿಲೆಯಿಂದ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರತಿ ಪೋಷಕರಿಗೂ ನಮ್ಮ ಮಕ್ಕಳಿಗೆ ಏನಾಗುತ್ತದೋ ಅಥವಾ ನಮ್ಮ ಮೃತಪಟ್ಟ ನಂತರ ನಮ್ಮ ಮಕ್ಕಳ ಗತಿಯೇನು ಎಂಬ ಆತಂಕ ಕಾಡುತ್ತಿದೆ.
ಐವರಲ್ಲಿ ಮೂವರಿಗೆ ಕಾಯಿಲೆ: ಇಲ್ಲಿನ ಮುನ್ನಿದೇವಿ ಎಂಬ ಕುಟುಂಬದ ಐವರು ಸದಸ್ಯರಲ್ಲಿ ಮೂವರು ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೂಲಿ ಹಾಗೂ ಎಮ್ಮೆ ಮೇಯಿಸಿಕೊಂಡು ಜೀವನ ನಡೆಸುತ್ತಿರುವ ಈ ಮಹಿಳೆಗೆ ಮಕ್ಕಳದ್ದೇ ಚಿಂತೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಎಂಟು ವರ್ಷಗಳ ಹಿಂದೆ ಮುನ್ನಿದೇವಿ ಪತಿ ಮೃತಪಟ್ಟಿದ್ದು, ಎಲ್ಲರನ್ನು ನೋಡಿಕೊಳ್ಳುವ ಹೊಣೆ ಈಕೆಯೇ ಮೇಲಿದೆ. ಆದ್ದರಿಂದ ಮಕ್ಕಳಿಗಾಗಿ ಸೂರ್ಯಾಸ್ತದ ಮೊದಲೇ ತಾಯಿ ಮನೆ ಸೇರುತ್ತಾಳೆ.
ಹಿರಿಯ ಮಗ ಕುಶಾಲ್‌ಗೆ 8 ವರ್ಷ ತುಂಬಿದಾಗ ರಾತ್ರಿಯಾದರೆ ಕಣ್ಣು ಕಾಣದಂತೆ ಆಯಿತು. ಆಗ ಪತಿ ಬದುಕಿದ್ದು, ಮಗನನ್ನು ಆಸ್ಪತ್ರೆಗೆ ಅವರು ಕರೆದೊಯ್ದಿದ್ದರು. ಆದರೆ, ಈತನ ಕಾಯಿಲೆ ಯಾರಿಗೂ ಅರ್ಥವಾಗಲಿಲ್ಲ. ನಂತರ ಎರಡನೇ ಮಗ ಅಮರ್‌ಗೂ ಅದೇ ಸಮಸ್ಯೆ ಕಾಣಿಸಿಕೊಂಡಿತು. ಜತೆಗೆ ಕಿರಿಯ ಮಗ ಅಮಿತ್ ಕೂಡ ಇಂತಹ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆದರೆ, ಮಗಳು ರಂಜನಾ ಈಗ ಚೆನ್ನಾಗಿದ್ದಾಳೆ. ಸಂಜೆಯಾದರೆ ಮೂವರೂ ಮಕ್ಕಳ ಸ್ಥಿತಿ ನೋಡಲು ನನಗೆ ಆಗುವುದಿಲ್ಲ. ನಮಗೆ ಸ್ವತಃ ಮನೆಯೂ ಇಲ್ಲ, ಹೊಲವೂ ಇಲ್ಲ ಎಂದು ಮುನ್ನಿದೇವಿ ಅಸಹಾಯಕ ನುಡಿಗಳನ್ನಾಡುತ್ತಾರೆ.
ಕುಟುಂಬಕ್ಕೆ ಆಸರೆಯಾಗಬೇಕಿದ್ದ ವಯಸ್ಸು: ಮುನ್ನಿದೇವಿ ಇಬ್ಬರು ಮಕ್ಕಳಾದ ಅಮರ್ಗೆ ಈಗ 21 ವರ್ಷದ ಹಾಗೂ ಕುಶಾಲ್ 19 ವರ್ಷ. ಆದರೆ, ಈ ಕಾಯಿಲೆಯಿಂದ ನೊಂದುಕೊಳ್ಳುವಂತೆ ಆಗಿದೆ. ಕುಟುಂಬಕ್ಕೆ ಆಸೆಯಾಗಬೇಕಿದ್ದ ವಯಸ್ಸಲ್ಲಿ ನಮಗೆ ಉತ್ತಮವಾಗಿ ದುಡಿಯಲು ಆಗುತ್ತಿಲ್ಲ. ನಾವು ಎಲ್ಲೋ ಕೆಲಸಕ್ಕೆ ಹೋಗಿದ್ದರೂ ಸಂಜೆಯಾಗುತ್ತಲೇ ಮನೆಗೆ ಬರಬೇಕು. ಇದರಿಂದ ಮಾಲೀಕರು ಕೋಪಗೊಳ್ಳುತ್ತಾರೆ ಮತ್ತು ಸಂಪಾದನೆ ಅಷ್ಟೊಂದು ಆಗುವುದಿಲ್ಲ ಎನ್ನುತ್ತಾರೆ ಈ ಸಹೋದರರು.
ವೃದ್ಧರನ್ನೂ ಕಾಡುತ್ತಿದೆ ಸಮಸ್ಯೆ: ಮುನ್ನಿದೇವಿ ಕುಟುಂಬ ಮಾತ್ರವೇ ಇಂತಹ ಸಮಸ್ಯೆಯ ಸುಲಿಗೆ ಸಿಲುಕಿಲ್ಲ. ಗ್ರಾಮದ ಅನೇಕರು ಸಹ ಇದನ್ನು ಪ್ರತಿ ದಿನ ಸಂಜೆಯಾದರೆ ಅನುಭವಿಸುತ್ತಾರೆ. ಇದರಲ್ಲಿ ರಾಮಶ್ರೀ (70) ಕೂಡ ಇಬ್ಬರು. ಮೊದಲು ಚೆನ್ನಾಗಿದ್ದ ಇವರಿಗೆ ಕೆಲ ವರ್ಷಗಳಿಂದ ದೃಷ್ಟಿ ಸಮಸ್ಯೆ ಎದುರಾಗಿದೆ. ಪಾಲಕಧಾರಿ ಎಂಬುವವರ ಮತ್ರ ಭವನ್ (25) ಬಾಲ್ಯದಿಂದಲೂ ಎರಡೂ ಕಣ್ಣುಗಳು ಕಾಣುತ್ತಿಲ್ಲ. ರಾಮ್ (45) ಅವರಿಗೂ ಈ ದೃಷ್ಟಿ ದೋಷ ಇದೆ. ಇಲ್ಲಿನ ಸ್ವಾಮೀಜಿ ಅವರೊಬ್ಬರ ಇಬ್ಬರು ಹೆಣ್ಣುಮಕ್ಕಳಿಗೂ ತಲಾ ಒಂದು ಕಣ್ಣಿನ ದೃಷ್ಟಿ ಇದೆ. ಇನ್ನು ಕೆಲವರಿಗೆ ಶ್ರವಣ ದೋಷ ಕೂಡ ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಅಪೌಷ್ಟಿಕತೆ ಕಾರಣ?: ಕೆಲವರಿಗೆ ವಂಶಪಾರಂಪರ್ಯವಾಗಿ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತದೆ. ಈ ಗ್ರಾಮಸ್ಥರ ಇಂತಹ ಸಮಸ್ಯೆ ಬಳಲುತ್ತಿರುವುದಕ್ಕೆ ಅಪೌಷ್ಟಿಕತೆ ಕಾರಣ ಇರಬಹುದು. ಈ ಭಾಗದಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಆದರೆ, ಸಮಗ್ರ ಮಾಹಿತಿ ಕಲೆ ಹಾಕಿದ ಮತ್ತು ತನಿಖೆಯ ನಂತರವೇ ಇದರ ನಿಖರ ಕಾರಣ ಗೊತ್ತಾಗಲಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯ ಎಸ್.ಕೆ.ವರ್ಮಾ ಪ್ರತಿಕ್ರಿಯಿಸಿದ್ದಾರೆ. ಇತ್ತ, ಗ್ರಾಮಸ್ಥರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕ ಮೋಹನ್ ವರ್ಮಾ ಭರವಸೆ ನೀಡಿದ್ದಾರೆ.