ಕರ್ನಾಟಕ

karnataka

ETV Bharat / bharat

ಹಿಂದಿನ ಸರ್ಕಾರದಿಂದ ಅಸ್ಸೋಂ,  ಈಶಾನ್ಯ ರಾಜ್ಯಗಳಿಗೆ ಮಲತಾಯಿ ಧೋರಣೆ: ಮೋದಿ ಆರೋಪ - ಯುಪಿಎ ಸರ್ಕಾರದ ವಿರುದ್ಧ ಮೋದಿ

ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಮೂರನೇ ಬಾರಿ ಅಸ್ಸೋಂಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಧೆಮಾಜಿ ಜಿಲ್ಲೆಯ ಸಿಲಾಪಥಾರ್​ನಲ್ಲಿ ಭಾಷಣ ಮಾಡಿದ್ದು, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದರು.

pm modi
ಪ್ರಧಾನಿ ಮೋದಿ

By

Published : Feb 22, 2021, 4:09 PM IST

ಸಿಲಾಪಥಾರ್: ಹಿಂದಿನ ಸರ್ಕಾರ ಅಸ್ಸೋಂ ಮತ್ತು ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆಯ ಮನಸ್ಥಿತಿ ಹೊಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಮೂರನೇ ಬಾರಿ ಅಸ್ಸೋಂಗೆ ಭೇಟಿ ನೀಡಿರುವ ಅವರು ಧೆಮಾಜಿ ಜಿಲ್ಲೆಯ ಸಿಲಾಪಥಾರ್​ನಲ್ಲಿ ಭಾಷಣ ಮಾಡಿದ್ದು, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದರು.

ಅಸ್ಸೋಂ ಹಾಗೂ ಈಶಾನ್ಯ ರಾಜ್ಯಗಳ ಬೆಳವಣಿಗೆಯನ್ನು ಹಿಂದಿನ ಸರ್ಕಾರಗಳು ತಡೆದಿವೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು ಐದು ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇದನ್ನೂ ಓದಿ:ಕರ್ನಾಟಕ, ಮಧ್ಯಪ್ರದೇಶ ಆಯ್ತು, ಇದೀಗ 'ಕೈ' ತಪ್ಪಿದ ಪುದುಚೇರಿ!

ಧೆಮಾಜಿ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ, ಸೌಲ್ಕುಚಿ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ, ಇಂಡಿಯನ್ ಆಯಿಲ್​ನ ಬೊಂಗೈಗಾಂವ್​​ ರಿಫೈನರಿಯಲ್ಲಿ ಐಎನ್​ಡಿಎಂಎಎಕ್ಸ್​ ವಿಭಾಗ ಲೋಕಾರ್ಪಣೆ, ದಿಬ್ರೂಗಢ ಬಳಿಯ ಮಧುಬನಿ ಬಳಿ ಆಯಿಲ್ ಇಂಡಿಯಾ ಲಿಮಿಟೆಡ್​ನ ಸೆಕೆಂಡರಿ ಟ್ಯಾಂಕ್ ಫಾರ್ಮ್ ಉದ್ಘಾಟನೆ, ಮಕುಮ್​ನಲ್ಲಿ ಗ್ಯಾಸ್ ಕಂಪ್ರೆಷನ್ ಸ್ಟೇಷನ್ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು.

ಹಿಂದಿನ ಭೇಟಿ ವೇಳೆ, ಈಶಾನ್ಯ ಭಾರತದ ರಾಜ್ಯಗಳು ಭಾರತದ ಅಭಿವೃದ್ಧಿಯ ಹೊಸ ಇಂಜಿನ್​​ಗಳಾಗಿವೆ. ಈಗ ಉದ್ಘಾಟನೆಯಾಗಿರುವ ಪ್ರಮುಖ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ, ನಾನು ಹೇಳುವುದು ವಾಸ್ತವವಾಗಲಿದೆ ಎಂದಿದ್ದಾರೆ.

ಬಿಜೆಪಿ ಯೋಜನೆಗಳನ್ನು ಬಣ್ಣಿಸಿದ ಪ್ರಧಾನಿ 2014ಕ್ಕೂ ಮೊದಲು ದೇಶದ ಅರ್ಧದಷ್ಟು ಜನರಿಗೆ ಮಾತ್ರ ಎಲ್​ಪಿಜಿ ಸಂಪರ್ಕವಿತ್ತು. ಅಸ್ಸೋಂನಲ್ಲಿ ಶೇಕಡಾ 40ರಷ್ಟು ಕುಟುಂಬಗಳು ಎಲ್​ಪಿಜಿ ಬಳಕೆ ಮಾಡುತ್ತಿದ್ದವು. ಈಗ ಶೇಕಡಾ ನೂರರಷ್ಟು ಕುಟುಂಬಗಳು ಎಲ್​ಪಿಜಿ ಬಳಸುತ್ತಿವೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನೂತನ ಶಿಕ್ಷಣ ನೀತಿಯಿಂದ ಅಸ್ಸೋಂ ರಾಜ್ಯದ ಜನತೆಗೆ ಅನುಕೂಲವಾಗಲಿದೆ ಎಂದು ಈ ವೇಳೆ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details