ಮುಂಬೈ :ದೇಶದ ಎಲ್ಲ ಕ್ಷೇತ್ರಗಳ ಹಬ್ ಆಗುತ್ತಿರುವ ರಾಜಧಾನಿ ಬೆಂಗಳೂರು ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲೂ ಮುಂದಿದೆ. ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 2021ರಲ್ಲಿ ಬರೋಬ್ಬರಿ 16.07 ಮಿಲಿಯನ್ ಜನರು ಪ್ರಯಾಣಿಸಿದ್ದಾರೆ. ಇದು ಕೊರೊನಾ ನಿರ್ಬಂಧದ ಬಳಿಕ ಶೇ.18.9ರಷ್ಟು ಏರಿಕೆ ಕಂಡಿದೆ.
ಕೋವಿಡ್ ಎರಡನೇ ಅಲೆಯ ಬಳಿಕ ನಿರ್ಬಂಧಗಳ ಸಡಿಲಿಕೆ ಮತ್ತು ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳ ಮಾಡಿದ ಬಳಿಕ ವಿಮಾನ ಪ್ರಯಾಣಿಕರ ಸಂಖ್ಯೆಯೂ ಏರಿಕೆ ಕಂಡಿದೆ ಎಂದು ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ಉಲ್ಬಣಗೊಂಡು 2 ತಿಂಗಳು ದೇಶೀಯ ವಿಮಾನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಈ ವೇಳೆ ವಿಮಾನ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿದಿತ್ತು. 2020ರಲ್ಲಿಯೂ ಕೂಡ 13.51 ಮಿಲಿಯನ್ ಜನರು ಮಾತ್ರ ಪ್ರಯಾಣ ಬೆಳೆಸಿದ್ದರು.