ಪಾಟ್ನಾ: ರಾಜಧಾನಿಯ ಪತ್ರಕಾರ್ ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬಿಜೆಪಿಯ ಮಾಜಿ ಶಾಸಕರ ಇಬ್ಬರು ಸಹೋದರರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರಾದ ಶಂಭು ಶರಣ್ ಮತ್ತು ಗೌತಮ್ ಸಿಂಗ್ ಅವರನ್ನು ಮಂಗಳವಾರ ಸಂಜೆ ಕಾಳಿ ಮಂದಿರ ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಡಬಲ್ ಮರ್ಡರ್‌ನಲ್ಲಿ ನೀಮಾ ನಿವಾಸಿ ಪಾಂಡವ್ ಗ್ಯಾಂಗ್‌ನ ಕಿಂಗ್‌ಪಿನ್ ಸಂಜಯ್ ಸಿಂಗ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಬಂದಿದ್ದ ಬೈಕ್ನಲ್ಲಿ ಪ್ರೆಸ್ ಎಂದು ಬರೆಯಲಾಗಿತ್ತು ಎನ್ನಲಾಗಿದೆ.
ನಡುರಸ್ತೆಯಲ್ಲಿ ಗುಂಡುಗಳ ಸುರಿಮಳೆ:ಪತ್ರಕಾರ್ ನಗರ ಪೊಲೀಸ್ ಠಾಣೆ ಬಳಿ ಬಿಜೆಪಿ ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಸಹೋದರರಿಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು. ಈ ವೇಳೆ, ಪಾತಕಿಗಳ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಿತ್ತರಂಜನ್ ಸಹೋದರರು ನಡುರಸ್ತೆಯಲ್ಲೇ ಬಿದ್ದು ನರಳಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪತ್ರಕಾರ್ ನಗರ ಠಾಣೆ ಪ್ರಭಾರಿ ಯುವಕರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲಿ ವೈದ್ಯರು ಗೌತಮ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ತಡರಾತ್ರಿ ಚಿಕಿತ್ಸೆ ಫಲಿಸದೇ ಶಂಭು ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.
ಓದಿ:ಸಿಧು ಮೂಸ್ ವಾಲಾರಿಂದ ಟುಪಕ್ ಶಕುರ್ ವರೆಗೆ: ಹತ್ಯೆಗೀಡಾದ ಐವರು ಖ್ಯಾತ ರ್ಯಾಪರ್ಗಳಿವರು