ಚಂಡೀಗಢ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಬಾಬಾ ಇಕ್ಬಾಲ್ ಸಿಂಗ್ ಶನಿವಾರ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಕ್ಬಾಲ್ ಸಿಂಗ್ ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದಿಂದ 2022ರ ಪದ್ಮಶ್ರೀ ನೀಡಲಾಗಿತ್ತು. ಸಾಮಾಜಿಕ ಸಬಲೀಕರಣಕ್ಕೆ ಸಿಂಗ್ ಅವರ ಸೇವೆ ಮಹತ್ತರವಾಗಿದೆ. 1926ರಲ್ಲಿ ಪಂಜಾಬ್ನಲ್ಲಿ ಜನಿಸಿದ್ದ ಇಕ್ಬಾಲ್ ಸಿಂಗ್, ಪಾಕಿಸ್ತಾನದ ಫೈಸಲಾಬಾದ್‌ನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ಬಳಿಕ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.