ನವದೆಹಲಿ:ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ 403 ಸ್ಥಾನಗಳಲ್ಲಿ 271 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಅಧಿಕಾರ ಪಡೆಯುವ ಮೂಲಕ ಇತಿಹಾಸ ರಚಿಸಿದೆ. ಇನ್ನು ಚುನಾವಣೆಯಲ್ಲಿ ಸಂಸದ ಅಸಾದುದ್ದಿನ್ ಓವೈಸಿ ಅವರ ಎಐಎಂಐಎಂ ಪಕ್ಷ ಒಂದೂ ಸ್ಥಾನ ಪಡೆಯದೇ ಸೊನ್ನೆ ಸುತ್ತಿದೆ.
ಮುಸ್ಲಿಮರು ಹೆಚ್ಚಾಗಿರುವ ಉತ್ತರಪ್ರದೇಶದ ಹಲವು ಕ್ಷೇತ್ರಗಳೂ ಸೇರಿದಂತೆ ಅಸಾದುದ್ದೀನ್ ಓವೈಸಿ ಪಕ್ಷ 100 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಅಷ್ಟೂ ಸ್ಥಾನಗಳಲ್ಲಿ ಎಲ್ಲಾ ಅಭ್ಯರ್ಥಿಗಳು ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮುಂದೆ ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷವೇ ದೂಳಿಪಟವಾಗಿದೆ.