ನವದೆಹಲಿ:ಕಳೆದ ಐದು ವರ್ಷಗಳಲ್ಲಿ ಆರು ಲಕ್ಷ ಭಾರತೀಯರು ತಮ್ಮ(ಭಾರತೀಯ ಪೌರತ್ವ) ಪೌರತ್ವ ತ್ಯಜಿಸಿದ್ದಾರೆಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಸಂಸತ್ ಚಳಿಗಾಲದ ಅಧಿವೇಶನದ ವೇಳೆ ವಿಪಕ್ಷ ಸದಸ್ಯರ ಪ್ರಶ್ನೆಯೊಂದಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಈ ಮಾಹಿತಿ ನೀಡಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 1,33,83,718 ಭಾರತೀಯರು ವಿವಿಧ ದೇಶಗಳಲ್ಲಿ ವಾಸವಿದ್ದಾರೆ. ಇವರ ಪೈಕಿ 2017ರಿಂದ 6 ಲಕ್ಷ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆಂದು ವಿವರಿಸಿದರು.
2017ರಲ್ಲಿ 1,33,049 ಲಕ್ಷ ಭಾರತೀಯರು, 2018ರಲ್ಲಿ 1,34,561 ಲಕ್ಷ, 2019ರಲ್ಲಿ 85,248 ಲಕ್ಷ ಹಾಗೂ 2020ರಲ್ಲಿ 1,11,287 ಜನರು ಭಾರತದ ಪೌರತ್ವ ತ್ಯಜಿಸಿದ್ದಾರೆ.