ಕರ್ನಾಟಕ

karnataka

ETV Bharat / bharat

15 ದಿನದಲ್ಲಿ 3.5 ಕೋಟಿ ತರುಣರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್​: ಕೇಂದ್ರ

ಕೊರೊನಾ ಲಸಿಕೆ ಪಡೆಯುವಲ್ಲಿ 'ಯಂಗ್ ಇಂಡಿಯಾ'ದ ಉತ್ಸಾಹವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಶ್ಲಾಘಿಸಿದ್ದಾರೆ.

COVID-19 vaccine
ಕೇಂದ್ರ ಸರ್ಕಾರ

By

Published : Jan 17, 2022, 6:00 PM IST

ನವದೆಹಲಿ:ಜನವರಿ 3 ರಿಂದ ಇಲ್ಲಿಯವರೆಗೂ 15 ರಿಂದ 18 ವಯೋಮಾನದ 3.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕೊರೊನಾ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದು, ಕೊರೊನಾ ಲಸಿಕೆ ಪಡೆಯುವಲ್ಲಿ 'ಯಂಗ್ ಇಂಡಿಯಾ'ದ ಉತ್ಸಾಹವನ್ನು ಶ್ಲಾಘಿಸಿದ್ದಾರೆ.

ಕೊರೊನಾ ಲಸಿಕೆ ಪಡೆಯುವಲ್ಲಿ ಯುವಕರು ಅತ್ಯುತ್ಸಾಹ ತೋರಿದ್ದಾರೆ. ಜನವರಿ 3 ನೇ ತಾರೀಖಿನಿಂದ 15- 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲು ಆರಂಭಿಸಲಾಗಿದೆ. ಇಲ್ಲಿಯವರೆಗೆ 3.5 ಕೋಟಿ ತರುಣರು ಲಸಿಕೆಯ ಮೊದಲ ಡೋಸ್​ ಪಡೆದುಕೊಂಡಿದ್ದಾರೆ. ನನ್ನೆಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಡಿಸೆಂಬರ್​ 25 ರಂದು 15- 18 ವರ್ಷದವರಿಗೆ ಮೊದಲ ಡೋಸ್​, 60 ವರ್ಷ ಮೇಲ್ಪಟ್ಟ ನಾಗರಿಕರು, ಆರೋಗ್ಯ ರಕ್ಷಕರು, ವೈದ್ಯರು, ಆರೋಗ್ಯ ಸಿಬ್ಬಂದಿಗೆ ಮುಂಜಾಗ್ರತಾ ಡೋಸ್​ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು.

ಇದನ್ನೂ ಓದಿ:ಬೆಂಗಳೂರೊಂದರಲ್ಲೇ 287 ಮಂದಿಗೆ ಒಮಿಕ್ರಾನ್ ದೃಢ: 766ಕ್ಕೆ ಏರಿದ ಸೋಂಕಿತರ ಸಂಖ್ಯೆ!

ABOUT THE AUTHOR

...view details