ಕರ್ನಾಟಕ

karnataka

ETV Bharat / bharat

ಮನಸ್ಸಿಲ್ಲದ ಏಕೈಕ ಸರ್ಕಾರ ಅಂದ್ರೆ ಅದು ಭಾರತ ಸರ್ಕಾರ: ಚಿದಂಬರಂ ಕಿಡಿಕಿಡಿ

ಪೆಗಾಸಸ್​​ ಕಣ್ಗಾವಲು ತಂತ್ರಾಂಶದ ಆರೋಪದ ವಿಚಾರವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Chidambaram
Chidambaram

By

Published : Jul 26, 2021, 1:58 PM IST

ನವದೆಹಲಿ:ಪೆಗಾಸಸ್​​ ಕಣ್ಗಾವಲು ತಂತ್ರಾಂಶದ ಆರೋಪದ ಬಗ್ಗೆ ಇಸ್ರೇಲ್​ ಪ್ರಧಾನಿ ನಫ್ತಾಲಿ ಜತೆ ಫ್ರಾನ್ಸ್​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್​ ಮಾತಾಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೆಗಾಸಸ್ ಬಗ್ಗೆ ಫ್ರಾನ್ಸ್​​​​​ ಸರ್ಕಾರ, ಇಸ್ರೇಲ್​ ಜತೆ ಮಾತುಕತೆ ನಡೆಸಿದೆ. ಆದರೆ, ಮೋದಿ ಸರ್ಕಾರ ಮನಸ್ಸಿಲ್ಲದ ಸರ್ಕಾರವಾಗಿದ್ದು, ಯಾವುದೇ ಮಾತುಕತೆ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ.

ಮೊರಾಕೊದ ಭದ್ರತಾ ಪಡೆಗಳು ಪೆಗಾಸಸ್ ಸ್ಪೈವೇರ್ ಬಳಸಿ ನನ್ನ ಮೊಬೈಲ್​ ಹ್ಯಾಕ್ ಮಾಡಿರಬಹುದು ಎಂಬ ವರದಿ ಕುರಿತು ಫ್ರೆಂಚ್ ಅಧ್ಯಕ್ಷ, ಇಸ್ರೇಲ್​ ಜತೆ ಮಾತುಕತೆ ನಡೆಸಿದ್ದಾರೆ. ಮ್ಯಾಕ್ರನ್ ಜುಲೈ 22 ರಂದು ಬೆನೆಟ್​ಗೆ ಕರೆ ಮಾಡಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ ಎಂದು ಇಸ್ರೇಲ್​ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ವರದಿ ಕುರಿತು ಟ್ವೀಟ್ ಮಾಡಿರುವ ಪಿ.ಚಿದಂಬರಂ, ಪೆಗಾಸಸ್​​ ಬಗ್ಗೆ ಯಾವುದೇ ತನಿಖೆ ನಡೆಸದ, ಮನಸ್ಸಿಲ್ಲದ ಏಕೈಕ ಸರ್ಕಾರ ನಮ್ಮ ಭಾರತ ಸರ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರವು, ಪೆಗಾಸಸ್​​ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಒತ್ತಾಯಿಸಬೇಕೆಂದು ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Pegasus ಮೂಲಕ 1,400 WhatsApp​ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು: ಸಿಇಒ ವಿಲ್​​ ಕ್ಯಾಥ್​ಕಾರ್ಟ್

ಪೆಗಾಸಸ್​​ ಆರೋಪದ ಬಗ್ಗೆ ಪ್ರಧಾನಿ ಮೋದಿ ಸಂಸತ್​ನಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details