ಕರ್ನಾಟಕ

karnataka

ETV Bharat / bharat

1ಕೋಟಿ ರೂ. ಮೌಲ್ಯದ 80 iPhone​ ಸೀಜ್​ ಮಾಡಿದ ಪೊಲೀಸರು - ಹೈದರಾಬಾದ್​ ಸುದ್ದಿ

ಶಾರ್ಜಾದಿಂದ ಹೈದರಾಬಾದ್​ಗೆ ತರಲಾಗಿದ್ದ 80 ಐಫೋನ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರ ಬಂಧನ ಮಾಡಲಾಗಿದೆ.

iPhone
iPhone

By

Published : Jun 24, 2021, 9:02 PM IST

ಹೈದರಾಬಾದ್​:ಶಂಶಾಬಾದ್​ ಏರ್​ಪೋರ್ಟ್​​ನಲ್ಲಿ ಬರೋಬ್ಬರಿ 1 ಕೋಟಿ ರೂ. ಮೌಲ್ಯದ 80 ಐಫೋನ್​ ವಶಕ್ಕೆ ಪಡೆದುಕೊಳ್ಳುವಲ್ಲಿ ಕಸ್ಟಮ್ಸ್​​ ಅಧಿಕಾರಿಯಾಗಳು ಯಶಸ್ವಿಯಾಗಿದ್ದಾರೆ. ಶಾರ್ಜಾದಿಂದ ಶಂಶಾಬಾದ್​ ಏರ್​ಪೋರ್ಟ್​ಗೆ ಆಗಮಿಸಿದ್ದ ಇಬ್ಬರ ಬ್ಯಾಗ್​​ನಲ್ಲಿ ಇಷ್ಟೊಂದು ಐಫೋನ್​ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಫೋನ್​ ಸೀಜ್​ ಮಾಡಲಾಗಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

1ಕೋಟಿ ರೂ. ಮೌಲ್ಯದ 80 iPhone​ ಸೀಜ್​ ಮಾಡಿದ ಪೊಲೀಸರು

ಲಗೇಜ್​ ವಿಭಾಗದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಐಫೋನ್​ ಕಂಡು ಬಂದಿವೆ ಎಂದು ಕಸ್ಟಮ್ಸ್​ ಇಲಾಖೆ ಪ್ರಧಾನ ಆಯುಕ್ತ ಜೆ.ಎಸ್​ ಚಂದ್ರಶೇಖರ್​ ಮಾಹಿತಿ ನೀಡಿದ್ದಾರೆ. ಸೀಜ್​ ಮಾಡಿರುವ ಪ್ರತಿ ಮೊಬೈಲ್​ನ ಬೆಲೆ 1ರಿಂದ ಒಂದೂವರೆ ಲಕ್ಷ ರೂ. ಆಗಿದ್ದು, ಎಲ್ಲ ಫೋನ್​ಗಳ ಒಟ್ಟು ಬೆಲೆ 1 ಕೋಟಿ 65 ಸಾವಿರ ರೂ. ಆಗಬಹುದು ಎಂದು ಅಂದಾಜಿಸಿದ್ದಾರೆ.

ಇವರ ಬಳಿ ನಾಲ್ಕು ಲಕ್ಷ ನಗದು ಹಣ ಕೂಡ ಸಿಕ್ಕಿದೆ ಎಂದಿದ್ದಾರೆ. ಬಂಧಿತರಲ್ಲಿ ಓರ್ವ ಗುಜರಾತ್ ಮೂಲದವನು ಹಾಗೂ ಮತ್ತೋರ್ವ ಹೈದರಾಬಾದ್​ನವನು ಎಂದು ತಿಳಿದು ಬಂದಿದ್ದು, ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿರಿ: Article 370 ಮರುಸ್ಥಾಪನೆಗೆ ಎಲ್ಲ ಪಕ್ಷಗಳ ಬೇಡಿಕೆ.. ಐತಿಹಾಸಿಕ ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ನಡೀತು!

ABOUT THE AUTHOR

...view details