ನವದೆಹಲಿ: ಅಫ್ಘಾನಿಸ್ತಾನದಲ್ಲಿದ್ದ ಭಾರತೀಯರನ್ನು ಹೊತ್ತ ವಾಯುಪಡೆಯ ಒಂದು ಸಿ -17 ಹೆಸರಿನ ವಿಮಾನವು ಇಂದು ಮಧ್ಯಾಹ್ನ ನವದೆಹಲಿಗೆ ಬಂದಿಳಿದಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಮತ್ತಷ್ಟು ಜನರನ್ನು ಸ್ಥಳಾಂತರಿಸಲು ವಿದೇಶಾಂಗ ಇಲಾಖೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಕಾಬೂಲ್ನಿಂದ ನವದೆಹಲಿಗೆ ಬಂದಿಳಿದ C-17 ವಿಮಾನ!
ಭಾರತೀಯರನ್ನು ಹೊತ್ತ ವಾಯುಪಡೆಯ ಒಂದು ಸಿ -17 ಹೆಸರಿನ ವಿಮಾನವು ಇಂದು ಮಧ್ಯಾಹ್ನ ನವದೆಹಲಿಗೆ ಬಂದಿಳಿದಿದೆ
C-17 ವಿಮಾನ
ಇಂದು ಮುಂಜಾನೆ, ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಭಾರತೀಯರನ್ನು ಸ್ಥಳಾಂತರಿಸುವುದಾಗಿ ವಿದೇಶಾಂಗ ಇಲಾಖೆ ಹೇಳಿಕೆ ನೀಡಿತ್ತು. ಅದರಂತೆ ಒಂದು ವಿಮಾನದಲ್ಲಿ ಜನರನ್ನು ಕರೆತರಲಾಗಿದೆ. ಇನ್ನೊಂದು ವಿಮಾನವನ್ನು ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ