ನವದೆಹಲಿ: 22 ನೇ ಕಾರ್ಗಿಲ್ ವಿಜಯೋತ್ಸವ ಹಿನ್ನೆಲೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಬಾರಾಮುಲ್ಲಾ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಯುದ್ಧದ ಸಮಯದಲ್ಲಿ ಸಶಸ್ತ್ರ ಪಡೆಗಳ ಅದಮ್ಯ ಧೈರ್ಯ ಮತ್ತು ತ್ಯಾಗದ ಗೌರವಾರ್ಥವಾಗಿ ರಾಷ್ಟ್ರಪತಿ ಕೋವಿಂದ್ ಮಾಲಾರ್ಪಣೆ ಮಾಡಿದ್ದಾರೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
‘ನಿಮ್ಮ ತ್ಯಾಗವನ್ನು ನಾವೆಂದಿಗೂ ಮರೆಯಲ್ಲ’
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. ಭಾರತೀಯ ಯೋಧರ ತ್ಯಾಗ, ಶೌರ್ಯ ನೆನೆಪಿಸಿಕೊಂಡಿರುವ ನಮೋ, ಅವರ ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ. ಅವರ ಶೌರ್ಯವನ್ನು ಭಾರತ ಎಂದೆಂದೂ ನೆನಪಿನಲ್ಲಿಡಲಿದೆ. ಯೋಧರ ಧೈರ್ಯ ನಮ್ಮನ್ನು ನಿತ್ಯವೂ ಪ್ರೇರೇಪಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ನಿನ್ನೆಯ ಮನ್ಕಿ ಬಾತ್ನಲ್ಲಿ ಮೋದಿ, ರಾಷ್ಟ್ರವೇ ಹೆಮ್ಮೆ ಪಡುವ ಧೈರ್ಯಶಾಲಿ ಹೃದಯಗಳಿಗೆ ನಾಳೆ (ಜನವರಿ 26, ಅಂದರೆ ಇಂದು) ನಮಸ್ಕರಿಸುವಂತೆ ಜನತೆಗೆ ಕೋರಿದ್ದರು. ದೇಶ ಭಕ್ತಿಯ ಈ ಭಾವನೆ ನಮ್ಮೆಲ್ಲರನ್ನೂ ಒಗ್ಗೂಡಿಸುತ್ತದೆ. ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಿಸ್ತಿನ ಸಂಕೇತ. ಇದನ್ನು ಇಡೀ ಜಗತ್ತೇ ಕಂಡಿದೆ. ಈ ಅದ್ಭುತ ದಿನವನ್ನು ಎಲ್ಲರೂ ಆಚರಿಸಿ, ಕಾರ್ಗಿಲ್ ವೀರರಿಗೆ ನಮಸ್ಕರಿಸಿ ಎಂದು ಕರೆ ನೀಡಿದ್ದರು.
ಉಪರಾಷ್ಟ್ರಪತಿಯಿಂದ ನಮನ