ನವದೆಹಲಿ: ಕೊರೊನಾ ರೂಪಾಂತರಿ ಒಮಿಕ್ರೋನ್ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿದೇಶಗಳಿಂದ ಅದರಲ್ಲೂ ಒಮಿಕ್ರೋನ್ ಪ್ರಕರಣಗಳು ದೃಢಪಟ್ಟ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಭಾರತದಲ್ಲಿ ಒಮಿಕ್ರೋನ್ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಹಾಗೂ ಕೋವಿಡ್-19 ತಡೆಗಟ್ಟುವ ಸಲುವಾಗಿ ಕೆಲ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಪಾಲಿಸಬೇಕು. ಈ ಮಾರ್ಗಸೂಚಿಗಳು ಡಿ.31ರ ವರೆಗೆ ಅನ್ವಯವಾಗಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕು ಹಾಗೂ ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್‌ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಮಿಕ್ರೋನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಒಂದು ವೇಳೆ ಸೋಂಕು ಪತ್ತೆಯಾಗದಿದ್ದರೂ, 7 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿ ಇರುವುದು ಕಡ್ಡಾಯ.
ಇದನ್ನೂ ಓದಿ:ಅಮಲಲ್ಲಿ ಮಚ್ಚು ಬೀಸಿದ ಕುಡುಕ: ಮೈಸೂರಿನಲ್ಲಿ ಒಬ್ಬರ ಸಾವು, ಐವರ ಸ್ಥಿತಿ ಗಂಭೀರ
ಪ್ರಯಾಣ ಪ್ರಾರಂಭಿಸುವ ಮೊದಲು ತಿಳಿದಿರಬೇಕಾದ ಅಂಶಗಳೇನು?
1) ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕು.
2) ಪ್ರಯಾಣ ಆರಂಭಿಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ವೈದ್ಯಕೀಯ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು.
3) ವಿಮಾನಯಾನ ಸಂಸ್ಥೆಗಳು ಈ ಷರತ್ತುಗಳ ನೆರವೇರಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
ದೇಶಕ್ಕೆ ಆಗಮಿಸುವವರಿಗೆ ಈ ನಿಯಮಗಳು ಕಡ್ಡಾಯ:
1) ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ವಯಂ ಘೋಷಣೆ ಪ್ರತಿ ಹೊಂದಿರಬೇಕು.
2) RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
3) ಒಮಿಕ್ರೋನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಒಂದು ವೇಳೆ ಸೋಂಕು ಪತ್ತೆಯಾಗದಿದ್ದರೂ, 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯ.