ಕರ್ನಾಟಕ

karnataka

ಗುಜರಾತ್‌ನಲ್ಲಿಂದು ಮತ್ತಿಬ್ಬರಿಗೆ ಒಮಿಕ್ರಾನ್‌ ; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆ

Omicron Cases In India : ಗುಜರಾತ್‌ನಲ್ಲಿಂದು ಇಬ್ಬರಿಗೆ ಒಮಿಕ್ರಾನ್‌ ದೃಢಪಟ್ಟಿದೆ. ಆ ಮೂಲಕ ದೇಶದಲ್ಲಿ ಈ ಹೊಸ ವೈರಸ್‌ನ ಒಟ್ಟು ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ..

By

Published : Dec 19, 2021, 7:21 PM IST

Published : Dec 19, 2021, 7:21 PM IST

omicron cases in rise in india; maharashtra again top
ಗುಜರಾತ್‌ನಲ್ಲಿಂದು ಮತ್ತಿಬ್ಬರಿಗೆ ಒಮಿಕ್ರಾನ್‌; ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆ

ನವದೆಹಲಿ :ದೇಶದಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇಂದು ಗುಜರಾತ್‌ನಲ್ಲಿ ಮತ್ತಿಬ್ಬರಿಗೆ ಹೊಸ ವೈರಸ್‌ ಕಾಣಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.

Omicron Cases In Gujarat :ಬ್ರಿಟನ್‌ನಿಂದ ಇಂದು ಗುಜರಾತ್‌ಗೆ ಬಂದ ಓರ್ವ ಭಾರತ ಮೂಲದ ವ್ಯಕ್ತಿ ಹಾಗೂ ಯುವಕನಲ್ಲಿ ಒಮಿಕ್ರಾನ್‌ ರೂಪಾಂತರಿ ಪತ್ತೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಇಬ್ಬರನ್ನೂ ಅಹಮ್ಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ದೇಶದ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಒಮಿಕ್ರಾನ್‌ ಹರಡಿದೆ. ಮಹಾರಾಷ್ಟ್ರದಲ್ಲಿ (48), ದೆಹಲಿ (22), ರಾಜಸ್ಥಾನ್‌ (17), ಕರ್ನಾಟಕ (14), ತೆಲಂಗಾಣ (20), ಗುಜರಾತ್‌ (10), ಕೇರಳ (11), ಆಂಧ್ರ ಪ್ರದೇಶ, ಚಂಡೀಗಢ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.

Omicron Cases In Maharashtra :ನಿನ್ನೆ ಮಹಾರಾಷ್ಟ್ರದಲ್ಲಿ ಹೊಸದಾಗಿ 8 ಮಂದಿಗೆ ಒಮಿಕ್ರಾನ್‌ ದೃಢಪಟ್ಟಿದ್ದರೆ, ನೆರೆಯ ತೆಲಂಗಾಣದಲ್ಲಿ ಪ್ರಕರಣಗಳ ಸಂಖ್ಯೆ 8 ರಿಂದ 20ಕ್ಕೆ ಏರಿಕೆಯಾಗಿದೆ. ನಿನ್ನೆ ಕರ್ನಾಟಕದಲ್ಲಿ 6 ಮತ್ತು ಕೇಳರದಲ್ಲಿ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 48 ಕೇಸ್‌ಗಳ ಪೈಕಿ ಈವರೆಗೆ 28 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

90 ದೇಶಗಳಿಗೆ ಹರಡಿದ ಒಮಿಕ್ರಾನ್‌!

Omicron Cases In World :ಕೋವಿಡ್‌ನ ರೂಪಾಂತರಿ ಒಮಿಕ್ರಾನ್ ಜಗತ್ತಿನಾದ್ಯಂತ ವಿಸ್ತರಿಸುತ್ತಲೇ ಇದೆ. ಡಬ್ಲ್ಯೂಹೆಚ್‌ಒ ಪ್ರಕಾರ, ಈವರೆಗೆ 90 ದೇಶಗಳಲ್ಲಿ ಒಮಿಕ್ರಾನ್‌ ಪತ್ತೆಯಾಗಿದೆ. ಡೆಲ್ಟಾ ರೂಪಾಂತರಿಗಿಂತಲೂ ಇದು ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಈ ವೈರಸ್‌ ರೋಗನಿರೋಧಕ ಶಕ್ತಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಒಮಿಕ್ರಾನ್‌ಗೆ ವೇರಿಯೆಂಟ್‌ಗೆ ಸಂಬಂಧಿಸಿದ ಮಾಹಿತಿ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ:Omicron : ದ.ಕನ್ನಡದ 5 ಮಂದಿ ಸೇರಿ 14ಕ್ಕೆ ಏರಿದ ಒಮಿಕ್ರಾನ್‌ ಸೋಂಕಿತರ ಸಂಖ್ಯೆ..

ABOUT THE AUTHOR

...view details